ಒಂದೇ ಒಂದು ಪೋಸ್ಟರ್ ಮೂಲಕ ಸಿನಿಮಾ ಪ್ರೇಮಿಗಳನ್ನೆಲ್ಲ ಸಾರಾಸಗಟಾಗಿ ಸೆಳೆದುಕೊಂಡಿದ್ದ ಚಿತ್ರ (bilichukki hallihakki movie) `ಬಿಳಿಚುಕ್ಕಿ ಹಳ್ಳಿಹಕ್ಕಿ’. (director mahesh gowda) ಮಹೇಶ್ ಗೌಡ ನಟಿಸಿ, ನಿರ್ಮಾಣ ಮಾಡಿ ನಿರ್ದೇಶಿಸಿರುವ ಈ ಚಿತ್ರ ಕಥೆಯ ಸುಳಿವಿನೊಂದಿಗೇ ತೀವ್ರ ಕುತೂಹಲ ಹುಟ್ಟುಹಾಕಿತ್ತು. vitiligo ಸಮಸ್ಯೆಯ ಸುತ್ತ ಜರುಗುವ ಈ ಸಿನಿಮಾದ ನಾಯಕಿಯನ್ನು ಪರಿಚಯಿಸುವ ಪೋಸ್ಟರ್ ಒಂದು ಇದೀಗ ಅನಾವರಣಗೊಂಡಿದೆ. ಒಟ್ಟಾರೆ ಸಿನಿಮಾದ ಬಗ್ಗೆ ಹೆಚ್ಚೇನೂ ವಿಚಾರಗಳನ್ನು ಬಿಟ್ಟು ಕೊಡದೆ, ಕಂಟೆಂಟಿನ ಛಾಯೆಯ ಮೂಲಕವೇ ಎಲ್ಲರನ್ನು ಆವರಿಸಿಕೊಳ್ಳುವ ಪರಿಣಾಮಕಾರಿ ನಡೆಯನ್ನು ಚಿತ್ರತಂಡ ಅನುಸರಿಸುತ್ತಾ ಬಂದಿದೆ. ಇದೀಗ ಈ ಚಿತ್ರದ ನಾಯಕಿಯಾಗಿ, ಕವಿತಾ (kavitha) ಎಂಬ ಪಾತ್ರದಲ್ಲಿ ನಟಿಸಿರುವ (kaajal kundar) ಕಾಜಲ್ ಕುಂದರ್ ಪಾತ್ರದ ಚಹರೆ ಜಾಹೀರಾಗಿದೆ!
ಖುದ್ದು ಈ ಚಿತ್ರದ ನಿರ್ದೇಶಕ (mahesh gowda) ಮಹೇಶ್ ಗೌಡ ಅವರೇ viಣiಟigo ಸಮಸ್ಯೆಯ ಅನುಭವ ಹೊಂದಿದ್ದಾರೆ. ಈ ಕಾರಣದಿಂದಲೇ ಅದರ ಸುತ್ತಲೇ ಜರುಗುವ ಕಥೆಯನ್ನು ಪಕ್ಕಾ ಕಮರ್ಶಿಯಲ್ ಧಾಟಿಯಲ್ಲಿ, ಮನೋರಂಜನೆ ಮುಕ್ಕಾಗದಂತೆ ಕಟ್ಟಿ ಕೊಟ್ಟಿದ್ದಾರಂತೆ. ಇದರ ನಾಯಕಿ ಪಾತ್ರಕ್ಕೂ ಕೂಡಾಠ ಮಹತ್ವವಿದೆ. ಸವಾಲುಗಳೂ ಇದ್ದಾವೆ. ಈ ಕಾರಣದಿಂದಲೇ ನಾಯಯಕಿ ಪಾತ್ರಕ್ಕಾಗಿ ಆಡಿಷನ್ ನಡೆಸಿ, ಎಲ್ಲ ದಿಕ್ಕಿನಿಂದಲೂ ಕಾಜಲ್ ಸೂಟ್ ಆಗುತ್ತಾರೆನ್ನಿಸಿದ್ದರಿಂದಲೇ ಆಯ್ಕೆ ಮಾಡಿಕೊಳ್ಳಲಾಗಿತ್ತಂತೆ. ಸೂಕ್ಷ್ಮ ಅಂಶಗಳನ್ನು ಹೊಂದಿರುವ ಈ ಪಾತ್ರಕ್ಕೆ ಕಾಜಲ್ ಲೀಲಾಜಾಲವಾಗಿ ಜೀವ ತುಂಬಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ. ಈ ಮೂಲಕ ಮತ್ತೊಂದಷ್ಟು ಬಗೆಯ ಪಾತ್ರಗಳಲ್ಲಿ ಮಿಂಚುತ್ತಾ, ಕಾಜಲ್ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲೆಂಬ ಸದಾಶಯ ನಿರ್ದೇಶಕರಲ್ಲಿದೆ.
ಹೀಗೆ ಬಿಳಿಚುಕ್ಕಿ ಹಳ್ಳಿ ಹಕ್ಕಿ ನಾಯಕಿಯಾಗಿ ಸದ್ದು ಮಾಡುತ್ತಿರುವ ಕಾಜಲ್ ಕುಂದರ್ ಮೂಲತಃ ಮಂಗಳೂರಿನ ಹುಡುಗಿ. ಮುಂಬೈನಲ್ಲಿ ನೆಲೆಗೊಂಡಿದ್ದರೂ ಕನ್ನಡ ಈಕೆಗೆ ಅಚ್ಚುಮೆಚ್ಚಿನ ಭಾಷೆ. ನಿಲರ್ಗಳವಾಗಿ ಕನ್ನಡದಲ್ಲಿ ಮಾತಾಡುವ ಕಾಜಲ್ ಈಗಾಗಲೇ ತುಳು ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಈ ಚಿತ್ರದ ಪಾತ್ರ ಆಕೆಯ ವೃತ್ತಿಬದುಕಿನ ಮೈಲಿಗಲ್ಲಾಗೋದರಲ್ಲಿ ಯಾವ ಸಂದೇಹವೂ ಇಲ್ಲ. ತುಳುನಾಡಿನ ಪ್ರತಿಭೆ ಕಾಜಲ್ ರಂಗಭೂಮಿಯಲ್ಲಿ ಹದಗೊಂಡಿರುವ ಕಲಾವಿದೆ. ರಂಗಭೂಮಿ ಕಟ್ಟಿಕೊಟ್ಟ ಅನುಭವಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಈ ಚಿತ್ರದ ನಾಯಕಿಯಾಗಿ, ಕವಿತಾ ಎಂಬ ಪಾತ್ರಕ್ಕವರು ಬಣ್ಣ ಹಚ್ಚಿದ್ದಾರಂತೆ.
ನಿರ್ಮಾಪಕರಾಗಿ, ನಿರ್ದೇಶಕರಾಗಿ, ನಾಯಕ ನಟನೂ ಆಗಿ ಹಲವು ಸವಾಲುಗಳಿಗೆ ಒಡ್ಡಿಕೊಂಡಿರುವ ಮಹೇಶ್ ಗೌಡ ಹೊನ್ನುಡಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ರೂಪಿಸಿದ್ದಾರೆ. ಈ ಹಿಂದೆ ಮಹಿರಾ ಎಂಬ ಚಿತ್ರವ್ನ್ನು ನಿರ್ದೇಶನ ಮಾಡುವ ಮೂಲಕ ಗಮನ ಸೆಳೆದಿದ್ದವರು ಮಹೇಶ್ ಗೌಡ. ಮಹಿರಾ ಮೂಡಿ ಬಂದಿದ್ದ ರೀತಿ ಕಂಡು ಸಿನಿಮಾ ಪ್ರೇಮಿಗಳೆಲ್ಲ ಅಚ್ಚರಿಗೊಂಡಿದ್ದರು. ಮೊದಲ ಚಿತ್ರದಲ್ಲಿಯೇ ಮಹೇಶ್ ಅವರ ನಿರ್ದೇಶನದ ಕಸುವಿನ ಅನಾವರಣವಾಗಿತ್ತು. ಹೀಗಿರೋದರಿಂದಲೇ ಬಿಳಿ ಚುಕ್ಕಿ ಹಳ್ಳಿ ಹಕ್ಕಿಯ ಬಗ್ಗೆಯೂ ಅಗಾಧ ನಿರೀಕ್ಷೆಗಳು ಮೂಡಿಕೊಂಡಿವೆ. ಇದೀಗ ಕವಿತಾ ಪಾತ್ರದ ಪೋಸ್ಟರ್ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟರಲ್ಲಿಯೇ ಬಿಡುಗಡೆ ದಿನಾಂಕ ಘೋಶಣೆ ಮಾಡಲು ಚಿತ್ರತಂಡ ತಯಾರಾಗುತ್ತಿದೆ. ಅದರ ಜೊತೆ ಜೊತೆಗೇ ಮತ್ತೊಂದಷ್ಟು ಬೆರಗುಗಗಳು ಹಂತ ಹಂತವಾಗಿ ಪ್ರೇಕ್ಷಕರ ಬೊಗಸೆ ತುಂಬಲಿವೆ.