ಈ ಬಾರಿಯ (biggboss season11) ಬಿಗ್ ಬಾಸ್ ಶೋ ಆರಂಭದಲ್ಲಿಯೇ ಭಾರೀ ವಿರೋಧ ಎದುರಿಸುವಂತಾಗಿತ್ತು. ಅಂಥಾದ್ದೊಂದು ವಿದ್ಯಮಾನಕ್ಕೆ ಕಾರಣವಾಗಿರೋದು ವಂಚಕಿ ಚೈನ್ ಚೈತ್ರಾಳ (chaithra kundapura) ಆಗಮನ. ಸಮಯ ಸಿಕ್ಕಾಗೆಲ್ಲ ದ್ವೇಷ ಭಾಷಣ ಮಾಡುತ್ತಾ, ಆ ಮೂಲಕ ಸಿಕ್ಕ ರಾಜಕಾರಣಿಗಳ ಸಖ್ಯವನ್ನು ಕಾಸು ಪೀಕುವ ದಂಧೆಗೆ ಬಳಿಸಿಕೊಂಡಿದ್ದಷ್ಟೇ ಈಕೆಯ ಮಹತ್ಸಾಧನೆ. ರಾಗವಾಗಿ ಮಾತಾಡುವುದನ್ನೇ ಭಾಷಣ ಅಂದುಕೊಂಡಂತಿರೋ ಈಕೆಯ ಮಾತುಗಳಲ್ಲಿ ದ್ವೇಷ ಬಿಟ್ಟರೆ ಮತ್ಯಾವ ತೂಕವೂ ಇರಲಿಲ್ಲ. ಹೇಳಿಕೇಳಿ ಇಂಥಾ ಕೂಗುಮಾರಿಗಳಿಗೆ ರಾಜಕೀಯವಾಗಿ ವೇದಿಕೆ ಸಿಗುತ್ತದೆ. ಎಲ್ಲ ಪಕ್ಷಗಳಲ್ಲಿಯೂ ಇಂಥವರಿಗೆ ಮಣೆ ಹಾಕುವ ಹೀನ ಪ್ರವೃತ್ತಿ ಇತ್ತೀಚೆಗೆ ಮೇರೆ ಮೀರಿಕೊಂಡಿದೆ. ಅದರಲ್ಲಿಯೂ ಭಾರತೀಯ ಜನತಾ ಪಾರ್ಟಿಗಂತೂ ಇಂಥಾ ಕೂಗುಮಾರಿಗಳನ್ನು ಕಂಡರೆ ತುಸು ಹೆಚ್ಚೇ ಪ್ರೀತಿ. ಈ ಕಾರಣದಿಂದಲೇ ಪ್ರವರ್ಧಮಾನಕ್ಕೆ ಬಂದಿದ್ದ ಚೈತ್ರಾ ಮಾಡಿಕೊಂಡಿದ್ದ ರಂಖಲುಗಳು ಒಂದೆರಡಲ್ಲ. ಇಂಥಾ ವ್ಯಕ್ತಿತ್ವ ಹೊಂದಿರುವ ಚೈತ್ರಾಳನ್ನು ಬಿಗ್ ಬಾಸ್ ಮನೆಯೊಳಗೆ ಬಿಟ್ಟುಕೊಂಡಿದ್ದೇ ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಧ್ವನಿಪೆಟ್ಟಿಗೆಯಲ್ಲೇ ಇರಿಟೇಟಿಂಗ್ ಅಂಶವಿಟ್ಟುಕೊಂಡಂತಿರೋ ಚೈತ್ರಾಳ ಮಾತು, ವರ್ತನೆಗಳೆಲ್ಲವೂ ರೇಜಿಗೆ ಹುಟ್ಟಿಸುವಂತಿವೆ. ಕಳೆದ ಬಾರಿ (drone prathap) ದ್ರೋಣ್ ಪ್ರತಾಪನನ್ನು ಬಿಗ್ ಬಾಸ್ ಮನೆಯೊಳಗೆ ಬಿಟ್ಟುಕೊಳ್ಳಲಾಗಿತ್ತಲ್ಲಾ? ಆತ ಕೂಡಾ ಒಂದರ್ಥದಲ್ಲಿ ಮೋಸಗಾರನೇ. ಆದರೆ, ಒಂದಷ್ಟು ಘಳಿಗೆಗಳಲ್ಲಿ ಪ್ರತಾಪನ ಮುಖದಲ್ಲಿ ಪಶ್ಚಾತ್ತಾಪ ಹಣಕಿ ಹಾಕುತ್ತಿತ್ತು. ಈ ಹುಡುಗನಿಗೆ ಒಂದು ಅವಕಾಶ ಕೊಟ್ಟರೆ ತಪ್ಪೇನಿಲ್ಲ ಎಂಬ ಭಾವ ವೀಕ್ಷಕರಲ್ಲಿ ಮೂಡಿಕೊಂಡಿತ್ತು. ಆದರೆ, ಈಕೆಯಿದ್ದಾಳಲ್ಲಾ ಚೈನ್ ಚೈತ್ರಾ? ಯಾವ ಘಳಿಗೆಯಲ್ಲಿಯೂ ಮುಖದಲ್ಲೊಂದು ಪಶ್ಚಾತ್ತಾಪದ ಗೆರೆ ಕಾಣಿಸಲು ಸಾಧ್ಯವಿಲ್ಲ. ಅದ್ಯಾರೋ ಬಾಬು ಪೂಜಾರಿಗೆ ಕೋಟಿ ಕೋಟಿ ನಾಮತೀಡಿದ್ದು, ನಾನಾ ಆಸೆ ಹುಟ್ಟಿಸಿ ಸಿಕ್ಕವರನ್ನೆಲ್ಲ ಮುಂಡಾಯಿಸಿದ್ದೆಲ್ಲವೂ ತನ್ನ ಶಕ್ತಿ ಎಂಬಂತೆ ಚೈತ್ರಾ ಮೆರೆಯುತ್ತಿದ್ದಾಳೆ.
ಸಾಮಾನ್ಯವಾಗಿ, ಕಿಚ್ಚನ ಪಂಚಾಯ್ತಿಯಲ್ಲಿ ನಡೆದ ಚರ್ಚೆಯ ಬಗ್ಗೆಮ, ಆ ಮೂಲಕ ಜಾಹೀರಾದ ಅಭಿಪ್ರಾಯಗಳ ಬಗ್ಗೆ ಸ್ಪರ್ಧಿಗಳು ಚರ್ಚೆ ನಡೆಸೋದಿಲ್ಲ. ಆದರೆ, ಬಾಯಿಬಡುಕಿ ಚೈತ್ರಾ ಸುದೀಪ್ ನಿರ್ಧಾರವನ್ನೇ ಪ್ರಶ್ನೆ ಮಾಡುತ್ತಾ, ತಕರಾರೆತ್ತುವ ಮೂಲಕ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಜಗದೀಶ್ ಪರ ವಹಿಸುವ ಭರದಲ್ಲಿ ಸುದೀಪ್ ತಮ್ಮನ್ನೆಲ್ಲ ವಿಲನ್ ಮಾಡಿದ್ದಾರೆ ಎಂಬರ್ಥದಲ್ಲಿ ಮಾತಾಡಿದ್ದಾಳೆ. ಮನೆಯೊಳಗೆ ಎಂಥಾದ್ದೇ ಚೆಂದದ ವಾತಾವರಣವಿದ್ದರೂ ಕ್ಷಣಾರ್ಧದಲ್ಲಿ ಅದನ್ನೆಲ್ಲ ಹಾಖುಗೆಡಹುವ ಟ್ಯಾಲೆಂಟೊಂದು ಈಕೆಯಲ್ಲಿದೆ. ಚೈತ್ರಾ ಬಾಯಿ ಬಿಡೋ ಸೂಚನೆ ಸಿಕ್ಕರೆ, ಊರು ಬಿಡಲು ತಯಾರಾಗಿ ನಿಲ್ಲುವ ಸ್ಪರ್ಧಿಗಳೇ ಬಿಗ್ ಬಾಸ್ ಮನೆಯೊಳಗಿದ್ದಾರೆ. ತನಗೆ ಮದುವೆ ಫಿಕ್ಸಾಗಿರೋದಾಗಿ ಹೇಳಿಕೊಂಡಿರುವ ಚೈತ್ರಾ ಯಾರಾದ್ರು ಲವ್ವುಗಿವ್ವು ಅಂತ ಮಾತಾಡಿದ್ರೆ ಮೆಟ್ಟಲ್ಲಿ ಹೊಡಿತೇನೆ ಅಂತೆಲ್ಲ ಕೂಗಾಡಿದ್ದಾಳೆ. ಈ ಬಜಾರಿಯನ್ನು ಲವ್ ಮಾಡುವ ಮಂಡೆಪೆಟ್ಟು ಆಸಾಮಿಗಳು ಅದ್ಯಾರಿದ್ದಾರೋ ಭಗವಂತನೇ ಬಲ್ಲ!
ಈ ಕೂಗುಮಾರಿ ಬಿಗ್ ಬಾಸ್ ಶೋಗೆ ಬರುತ್ತಾಳೆಂದಾಕ್ಷಣವೇ ಅಪಸ್ವರವೆದ್ದಿತ್ತು. ಈ ಬಗ್ಗೆ ಸುದೀಪ್ ಗೆ ಅನೇಕರು ಪ್ರಶ್ನೆಗಳ ಸುರಿಮಳೆಗರೆದಿದ್ದರು. ಅಂಥಾ ವಾತಾವರಣ ಯಾಕೆ ಸೃಷ್ಟಿಯಾಗಿತ್ತೆಂಬುದೀಗ ಖುದ್ದು ಕಿಚ್ಚನಿಗೇ ಅರ್ಥವಾಗಿರಬಹುದೇನೋ… ಈಕೆ ಈ ಸೀಜನ್ನಿಗೊಂದು ಕಪ್ಪುಚುಕ್ಕೆಯಂತಿದ್ದಾಳೆ. ಅಚಾನಕ್ಕಾಗಿ ತಪ್ಪು ಮಾಡೋರನ್ನು ಕ್ಷಮಿಸಬಹುದು. ಮಾಡಿದ ತಪ್ಪಿಗೆ ಪ್ಶ್ಚಾತ್ತಾಪ ಇರುವವರಿಗೂ ಒಂದು ಅವಕಾಶ ಕೊಟ್ಟು ನೋಡಬಹುದು. ಆದರೆ, ಚೈತ್ರಾಳಂತವರು ಉದ್ದೇಶಪೂರ್ವಕವಾಗಿಯೇ ವಂಚನೆಗಿಳಿಯುವ ಜಾಯಮಾನದವರು. ಎಲ್ಲವನ್ನೂ ಸಬೂಬಿನಿಂದ ಮುಚ್ಚಿ ಹಾಕಿ ಸಭ್ಯಸ್ಥರಂತೆ ಪೋಸು ಕೊಡುವವರು. ಇಂಥವರನ್ನೆಲ್ಲ ಸ್ಪಧಿಗಳಾಗಿ ಆರಿಸಿದ್ದೇ ಬಿಗ್ ಬಾಸ್ ಶೋನ ಅತಿ ದೊಡ್ಡ ದುರಂತ!