ತೆಲುಗು ಚಿತ್ರರಂಗದೊಳಗಿನ (telugu film industry) ಕಾಮಪುರಾಣಗಳ (sex scandals) ಆಗಾಗ ಹಬೆಯಾಡುತ್ತಿರುತ್ತವೆ. ಈ ಸಿನಿಮಾ ರಂಗ ರಾಜಕೀಯವಾಗಿ, ಆರ್ಥಿಕವಾಗಿ ಪ್ರಭಾವಿಗಳಾಗಿರುವವರ ಮುಷ್ಠಿಯಲ್ಲಿರೋದರಿಂದ, ಕಾಮ ಸಂಬಂಧಿ ಹಗರಣಗಳು ದೊಡ್ಡ ಮಟ್ದಲ್ಲಿ ಸೌಂಡು ಮಾಡುವುದಿಲ್ಲ. ಜಾನಿ ಮಾಸ್ಟರ್ (janny master) ಥರದ ಮಂದಿ ತಲಗುಲಿಕೊಂಡರೆ ಅದೇ ಅಚ್ಚರಿಯ ಸಂಗತಿ. ಇಂಥಾ ವಾತಾವರಣದಲ್ಲಿ ಪೂನಂ ಕೌರ್ (actress poonam kaur) ಪುರುಷಾಧಿಪತ್ಯದ ವಿರುದ್ಧ ನಿರ್ಣಾಯಕ ಯುದ್ಧ ಸಾರಿದ್ದಾಳೆ. ಈಗ ಬೇರೆಯದ್ದೇ ವೇಷ ಹಾಕಿಕೊಂಡು, ಧರ್ಮೋದ್ದಾರಕನ ಪೋಸು ಕೊಡುತ್ತಿದ್ದಾನಲ್ಲಾ (pawan kalyan) ಪವನ್ ಕಲ್ಯಾಣ್? ಈತನ ವಿರುದ್ಧವಂತೂ ಸೋಶಿಯಲ್ ಮೀಡಿಯಾ ಮೂಲಕ ಪೂನಂ ಪ್ರಹಾರ ನಡೆಸುತ್ತಾ ಬಂದಿದ್ದಾಳೆ. ಪವನ್ ಕಲ್ಯಾಣ್ ನೆಚ್ಚಿನ ಭಂಟನಂತಿರೋ ಖ್ಯಾತ ನಿರ್ದೇಶಕ ತ್ರಿವಿಕ್ರಮ್ (director trivikram) ಮೇಲೂ ಕೆಂಡ ಕಾರುತ್ತಿದ್ದಾಳೆ. ಇದೆಲ್ಲವನ್ನೂ ಕಂಡ ಮಂದಿ ಕೆಂಡವಿಲ್ಲದೆ ಹೊಗೆಯಾಡಲು ಸಾಧ್ಯವಿಲ್ಲ ಎಂಬ ಲೋಕರೂಢಿಯ ಸತ್ಯವನ್ನು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ!
ಸೋಶಿಯಲ್ ಮೀಡಿಯಾದಲ್ಲಿ (poonam kaur) ಪೂನಂ ಕೌರ್ ಅಕ್ಷರಶಃ ಸಂಚಲನ ಸೃಷ್ಟಿಸುತ್ತಾ ಬಂದಿದ್ದಾಳೆ. ಅದರಲ್ಲಿಯೂ ವಿಶೇಷವಾಗಿ ಪವನ್ ಕಲ್ಯಾಣ್ ವಿರುದ್ಧದ ಪೋಸ್ಟ್ ಗಳ ಮೂಲಕ ಈಕೆ ಸದಾ ಸುದ್ದಿಯಲ್ಲಿರುತ್ತಾಳೆ. ಇತ್ತೀಚೆಗೆ ಮತ್ತೆ ಬಾಂಬು ಸಿಡಿಸಿರುವ ಪೂನಂ, ಪವನ್ ಕಲ್ಯಾಣ್ ನೆಚ್ಚಿನ ಗೆಣೆಕಾರ ಡೈರೆಕ್ಟರ್ ತ್ರಿವಿಕ್ರಮ್ ಮೇಲೆ ಘನಗಂಭೀರ ಆರೋಪ ಮಾಡಿದ್ದಾಳೆ. ತ್ರಿವಿಕ್ರಮ್ ಓರ್ವ ಹೆಣ್ಣುಬಾಕ ಅಂದಿರೋ ಪೂನಂ, ಆತ ಅವಕಾಶ ಕೊಡುವ ನೆಪದಲ್ಲಿ ಪಂಜಾಬಿ ಹುಡುಗಿಯೋರ್ವಳ ಬದುಕನ್ನೇ ಬರ್ಬಾದೆಬ್ಬಿಸಿದ್ದಾನೆಂದು ಆರೋಪಿಸಿದ್ದಾಳೆ. ಎಳೇ ವಯಸ್ಸಿನ ಆ ಹುಡುಗಿಯನ್ನು ನಂಬಿಸಿ ಕತ್ತು ಕುಯ್ದಿದ್ದಾನೆ ಎಂಬಂಥಾ ಪೂನಂ ಮಾತುಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ಚರ್ಚೆಗಳು ಶುರುವಾಗಿವೆ. ಅಷ್ಟಕ್ಕೂ ಇಂಥಾ ವಿಚಾರಗಳು ತೆಲುಗು ಚಿತ್ರರಂಗದ ಆಂತರಿಕ ವಲಯದಲ್ಲಿ ಮಾಮೂಲು ಸುದ್ದಿಯಾಗಿ ಉಸಿರುಚೆಲ್ಲಬಹುದೇನೋ. ಯಾಕೆಂದರೆ, ಅದರೊಳಗೆ ಅಂಥಾ ಕಿಸುರುಗಳು ಸಾವಿರವಿದ್ದಾವೆ!
ಹಾಗಾದರೆ, ಪೂನಂ ಮಾತುಗಳಲ್ಲಿ ಸತ್ಯವಿಲ್ಲವೇ? ಆಕೆ ಯಾವುದೋ ವೈಯಕ್ತಿಕ ಜಿದ್ದಿಗೆ ಬಿದ್ದು ತ್ರಿವಿಕ್ರಮ್ ಮತ್ತು ಪವನ್ ಕಲ್ಯಾಣ್ ವಿರುದ್ಧ ದ್ವೇಷ ಸಾಧಿಸುತ್ತಿದ್ದಾಳಾ? ಇಂಥಾ ಒಂದಷ್ಟು ಪ್ರಶ್ನೆಗಳನ್ನಿಟ್ಟುಕೊಂಡು ತಲಾಷೆಗಿಳಿದರೆ ಬಣ್ಣ ಬಣ್ಣದ ಸೀಕ್ರೆಟ್ಟುಗಳು ತಂತಾನೇ ಜಾಹೀರಾಗುತ್ತವೆ. ಈವತ್ತಿಗೆ ತ್ರಿವಿಕ್ರಮ್ ಸ್ಟಾರ್ ಡೈರೆಕ್ಟರ್. ಆತ ಪವನ್ ಕಲ್ಯಾಣ್‌ಗಂತೂ ನೆಚ್ಚಿನ ಗೆಳೆಯ. ಒಂದು ಕಾಲದಲ್ಲಿ ನಾಗಾರ್ಜುನನ ಸಿನಿಮಾ ಮೂಲಕ ಬರಹಗಾರನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾತ ತ್ರಿವಿಕ್ರಮ್. ಸಿನಿಮಾ ಒಂದು ಚೆಂದಗೆ ರೂಪ;ಉಗೊಳ್ಳಲು ಯಾವ್ಯಾವ ಅಂಶಗಳು ಬೇಕಾದರೂ, ಅದರ ಆರಂಭ ಬಿಂದು ಬರವಣಿಗೆ. ಸಿನಿಮಾ ಬರವಣಿಗೆಯನ್ನು ಅರೆದು ಕುಡಿದಂತಿದ್ದ ತ್ರಿವಿಕ್ರಮನ ಪ್ರತಿಭೆ ಕಂಡು ತೆಲುಗು ಸಿನಿಮಾ ಮಂದಿ ಬೆಕ್ಕಸ ಬೆರಗಾಗಿದ್ದರು.
ಈ ಕಾರಣದಿಂದಲೇ ಈತನಿಗೆ `ಮಾಟಲ ಮಾಂತ್ರಿಕುಡು’ ಅಂತೊಂದು ಬಿರುದು ಸಿಕ್ಕಿದೆ. ಮಾತಿನ ಮಾಂತ್ರಿಕನೆಂಬ ಆ ಬಿರುದಿಗೆ ತಕ್ಕಂತಿದ್ದ ತ್ರಿವಿಕ್ರಮ್ ನಿರ್ದೇಶಕನಾಗಿಯೂ ಗೆದ್ದಿದ್ದಾನೆ. ಬರಬರುತ್ತಾ ಈ ಅಕ್ಷರ ಮಾಂತ್ರಿಕ ಕಾಮಸನ್ನಿಯಿಂದ ನರಳಲಾರಂಭಿಸಿದ್ದ ಅಂತ ಹತ್ತಿರದಿಂದ ಬಲ್ಲ ಮಂದಿಯೇ ಗುಲ್ಲೆಬ್ಬಿಸಲಾರಂಭಿಸಿದ್ದರು. ಸಿನಿಮಾ ಒಂದು ಆರಂಭವಾದರೆ, ಆಡಿಷನ್ನುಗಳ ಮೂಲಕವೇ ಈತ ಹುಡುಗೀರ ಬೇಟೆಗಿಳಿಯುತ್ತಾನೆಂಬ ರೂಮರ್ ಹಬ್ಬಿಕೊಂಡಿತ್ತು. ತ್ರಿವಿಕ್ರಮ್ ಸುಸಜ್ಜಿತವಾದ ಫಾರ್ಮ್ ಹೌಸ್ ಒಂದನ್ನು ಕಟ್ಟಿಕೊಂಡಿದ್ದಾನೆ. ಅದು ಅಕ್ಷರಶಃ ಕಾಮದ ಕುಲುಮೆ ಎಂಬಂಥಾ ಆರೋಪಗಳಿವೆ. ಅಲ್ಲಿ ಬೇಟೆಯಾಡಿದ ಹುಡುಗೀರನ್ನು ಪಳಗಿಸಿಕೊಳ್ಳುತ್ತಾನೆ. ಮಧ್ಯ ರಾತ್ರಿಯ ಹೊತ್ತಿಗೆ ಒರಿಜಿನಲ್ ಗ್ಯಾಂಗ್‌ಸ್ಟರ್ ಪವನ್ ಕಲ್ಯಾಣ್ ಹೋಗಿ ಬರುತ್ತಾನೆಂಬ ಆರೋಪಗಳಿದ್ದಾವೆ. ಈವತ್ತಿಗೆ ದನದ ಕೊಬ್ಬು ಬೆರೆತ ತಿರುಪತಿ ಲಡ್ಡಿನ ಸುತ್ತಾ ಪವನ್ ಭರ್ಜರಿ ಮೈಲೇಜು ಗಿಟ್ಟಿಸಿಕೊಳ್ಳುತ್ತಿದ್ದಾನೆ. ಧರ್ಮ ಉಳಿಸಲೆಂದೇ ಅವತರಿಸಿದವನಂತೆ ನಾಟಕ ಶುರುವಿಟ್ಟಿದ್ದಾನೆ. ಇಂಥವನು ಎಳೇ ಹುಡುಗೀರನ್ನು ತುಂಬಿಕೊಂಡ ತ್ರಿವಿಕ್ರಮನ ಫಾರ್ಮ್ ಹೌಸಿಗೆ ಸರಹೊತ್ತಿನಲ್ಲಿ ದಾಂಗುಡಿಯಿಡೋದು ಬಹುಶಃ ಭಜನೆ ಮಾಡಲಿಕ್ಕಿರಬಹುದೇನೋ!
ಇಂಥಾ ಪವನ್ ಕಲ್ಯಾಣ್ ವಿರುದ್ಧ ಯೂಟ್ಯೂಬರ್ ಆಗಿದ್ದ ಕತ್ತಿ ಮಹೇಶ ನೇರಾನೇರ ಪ್ರಹಾರಕ್ಕೆ ನಿಂತಿದ್ದ. ಪವನ್ ಸಿನಿಮಾಗಳನ್ನು ಟೀಕಿಸುತ್ತಲೇ, ಆತನನ್ನು ನಿಷ್ಠುರವಾಗಿ ವಿಮರ್ಶೆಗೊಳಪಡಿಸುತ್ತಿದ್ದ. ಅದೆಂಥಾ ಪ್ರತಿರೋಧ ಬಂದರೂ ಜಗ್ಗದೆ ಪವನ್ ಕಲ್ಯಾಣನನ್ನು ಎದುರು ಹಾಕಿಕೊಂಡಿದ್ದ. ಕತ್ತಿ ಮಹೇಶ ಮೆತ್ತಗೆ ತ್ರಿವಿಕ್ರಮನ ಫಾರ್ಮ್ ಹೌಸಿಗೆ ಕ್ಯಾಮೆರಾ ಫೋಕಸ್ ಮಾಡಿದ್ದನಾ? ಮಧ್ಯರಾತ್ರಿ ಎಳೇ ಹುಡುಗೀರೊಂದಿಗೆ ಪವನ್ ಕಲ್ಯಾಣ್ ಮಾಡುತ್ತಿದ್ದ ಧ್ವಾನದ ವಿಡಿಯೋಗಳನ್ನು ಹಿಡಿದಿಟ್ಟುಕೊಂಡಿದ್ದನಾ ಗೊತ್ತಿಲ್ಲ. ಇಂಥಾ ಕತ್ತಿಮಹೇಶ ವರ್ಷಗಳ ಹಿಂದೆ ಆಕ್ಸಿಡೆಂಟ್ ಒಂದರಲ್ಲಿ ಭೀಕರವಾಗಿ ಸತ್ತಿದ್ದ. ಆ ಕಾಲದಲ್ಲಿ ಆಂಧ್ರ ಮುಖ್ಯಮಂತ್ರಿಯಾಗಿದ್ದ ಜಗನ್ ಮೋಹನ್ ರೆಡ್ಡಿ ಈ ಆಕ್ಸಿಡೆಂಟಿನ ಬಗ್ಗೆ ತನಿಖೆಗೆ ಆದೇಶ ನೀಡಿದ್ದ. ಆದರೆ, ಆ ತನಿಖೆ ಏನಾಯ್ತು? ಕತ್ತಿ ಮಹೇಶನದ್ದು ಕೊಲೆಯಾ ಎಂಬ ಪ್ರಶ್ನೆಗಳಿನ್ನೂ ಹಾಗೇ ಉಳಿದುಕೊಂಡಿವೆ.
ಈ ಕತ್ತಿ ಮಹೇಶ ಅಪಘಾತಕ್ಕೆ ಬಲಿಯಾದಾಗ ತೆಲುಗುನಾಡಿನಲ್ಲಿ ಇದೊಂದು ಕೊಲೆ ಎಂಬಂಥಾ ಚರ್ಚೆ ನಡೆದಿತ್ತು. ಪವನ್ ಕಲ್ಯಾಣ್ ಸುತ್ತಾ ಗಾಢ ಅನುಮಾನ ಬೀಟು ಹೊಡೆದಿತ್ತು. ಒಂದು ಮೂಲದ ಪ್ರಕಾರ, ಈ ತ್ರಿವಿಕ್ರಮ್ ಸಿನಿಮಾ ಹೆಸರಿನಲ್ಲಿ ಹೆಣ್ಣಿನ ಹನನ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾನೆ. ಆತನ ಫಾರ್ಮ್ ಹೌಸು ಇಂಥಾ ದಂಧೆಗಳ ಗುಡಾಣವಾಗಿದೆ. ಅವಕಾಶ ಕೇಳಲು ಬಂದ ಹುಡುಗೀರನ್ನು ಮಂಚವೇರಿಸಲು ನೋಡಿ, ಅದಕ್ಕೊಪ್ಪದಿದ್ದರೆ ಪಾತ್ರದಿಂದಲೇ ಕಿತ್ತೆಸೆಯುತ್ತಾನೆಂಬ ಆರೋಪ ತ್ರಿವಿಕ್ರಮ್ ಮೇಲಿದೆ. ಈ ಹಿಂದೆ ತ್ರಿವಿಕ್ರಮ್ ನಿರ್ದೇಶನದ ಜಲ್ಸಾ ಅಂತೊಂದು ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರಲ್ಲಿ ಇದೇ ಪವನ್ ಕಲ್ಯಾಣ್ ನಾಯಕನಾಗಿದ್ದ. ಆರಂಭದಲ್ಲಿ ಆ ಸಿನಿಮಾ ನಾಯಕಿಯಾಗಿ ಪೂನಂ ಕೌರ್ ಳನ್ನು ಆಯ್ಕೆ ಮಾಡಲಾಗಿತ್ತಂತೆ. ಆ ನಂತರ ಅವಕಾಶ ಕಿತ್ತುಕೊಳ್ಳಲಾಗಿತ್ತೆಂದು ಪೂನಂ ಆರೋಪಿಸಿದ್ದಾಳೆ. ಈ ಆರೋಪಕ್ಕೂ, ಹಬ್ಬಿಕೊಂಡಿರುವ ರೂಮರುಗಳಿಗೂ ಸಾಮ್ಯತೆ ಇದೆಯೆಂದೇ ಅನ್ನಿಸುತ್ತಿದೆ!