ಭಿನ್ನ ಪಥದ ಮೂಲಕವೇ ಪ್ರೇಕ್ಷಕರನ್ನು ಮುಖಾಮುಖಿಯಾಗ ಹೊರಟಿರುವ ಸಿನಿಮಾಗಳ ಸಾಲಿನಲ್ಲಿ ಸದ್ಯಕ್ಕೆ (kenda movie) `ಕೆಂಡ’ ಪ್ರಧಾನವಾಗಿ ಕಾಣಿಸುತ್ತಿದೆ. (director sahadev kelavadi) ಸಹದೇವ್ ಕೆಲವಡಿ ನಿರ್ದೇಶನದ ಈ ಚಿತ್ರವನ್ನು ಗಂಟುಮೂಟೆ ಖ್ಯಾತಿಯ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ಶುರುವಾತಿನಿಂದ ಇಲ್ಲಿಯವರೆಗೂ ಕೆಂಡದ ಬಗ್ಗೆ ಪ್ರೇಕ್ಷಕರೆಲ್ಲರ ಗಮನ ಸುಳಿದಾಡುವಂತೆ ಮಾಡಿಕೊಂಡು ಬರಲಾಗುತ್ತಿದೆ. ಇದೊಂದು ವಿಭಿನ್ನ ಕಥಾನಕವನ್ನು ಒಳಗೊಂಡಿರುವ ಚಿತ್ರವೆಂಬ ಸೂಚನೆಯೂ ಈಗಾಗಲೇ ರವಾನೆಯಾಗಿದೆ. ಈ ಹೊತ್ತಿನಲ್ಲಿ ಚಿತ್ರತಂಡ ಖುಷಿಯ ಸಂಗತಿಯೊಂದನ್ನು ಹಂಚಿಕೊಂಡಿದೆ!
ಕೆಂಡ ಚಿತ್ರದ ಆಡಿಯೋ ಹಕ್ಕುಗಳನ್ನು ಪ್ರಸಿದ್ಧ ಡಿ ಬೀಟ್ಸ್ ಸಂಸ್ಥೆ ಪಡೆದುಕೊಂಡಿದೆ. ಈ ಹಂತದಲ್ಲಿ ವ್ಯವಹಾರದಾಚೆ ಹಬ್ಬಿಕೊಂಡಿರುವ ಮೆಚ್ಚುಗೆಯ ಮಾತುಗಳು, ಸಕಾರಾತ್ಮಕ ವಾತಾವರಣ ಕಂಡು ಚಿತ್ರತಂಡ ಖುಷಿಗೊಂಡಿದೆ. ಖ ಬೀಟ್ಸ್ ಮುಖ್ಯಸ್ಥರಾದ ಸಂಗೀತ ನಿರ್ದೇಶಕ (vi harikrishna) ವಿ ಹರಿಕೃಷ್ಣ ಕೆಂಡದ ಹಾಡುಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಕೆಂಡದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ರಿತ್ವಿಕ್ ಗೆ ಗೆಲುವು ದೊರೆತಂತಾಗಿದೆ. ಯಾಕೆಂದರೆ, ಯಾವ ಪಳಗಿದ ಸಂಗೀತ ನಿರ್ದೇಶಕನಿಗೂ ಕಡಿಮೆ ಇಲ್ಲದಂತೆ ಅವರಿಲ್ಲಿ ಕಾರ್ಯನಿರ್ವಹಿಸಿರುವ ಲಕ್ಷಣಗಳು ಹರಿಕೃಷ್ಣರ ಮೆಚ್ಚುಗೆಯ ಮೂಲಕವೇ ಗೋಚರಿಸುತ್ತಿವೆ.
ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ರೂಪಾ ರಾವ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಗಂಟುಮೂಟೆ ಎಂಬ ಚಿತ್ರದ ನಿರ್ದೇಶಕಿಯಾಗಿ ಸೈ ಅನ್ನಿಸಿಕೊಂಡಿದ್‍ದ ರೂಪಾ ರಾವ್ ಕೆಂಡದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಸಹದೇವ್ ಕೆಲವಡಿ ಇದರೊಂದಿಗೆ ಸ್ವತಂತ್ರ ನಿದೇಶಕರಾಗಿದ್ದಾರೆ. ಒಂದು ಸೂಕ್ಷ್ಮವಾದ ಕಥನವನ್ನು ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವ ಧಾಟಿಯಲ್ಲಿ ಕೆಂಡವನ್ನು ಸಹದೇವ್ ರೂಪಿಸಿದ್ದಾರೆಂಬ ಮಾತಿದೆ. ಇದೀಗ ಮ್ಯೂಸಿಕ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಡಿ ಬೀಟ್ಸ್ ಆಡಿಯೋ ಹಕ್ಕು ಖರೀದಿಸಿರೋದರಿಂದ ಕೆಂಡದ ಖದರ್ ಮತ್ತಷ್ಟು ನಿಗಿನಿಗಿಸಿದಂತಾಗಿದೆ. ಇಷ್ಟರಲ್ಲಿಯೇ ಕೆಂಡದ ಸುತ್ತಲಿನ ಮತ್ತೊಂದಷ್ಟು ಇಂಟರೆಸ್ಟಿಂಗ್ ಮಾಹಿತಿಗಳು ಜಾಹೀರಾಗಲಿವೆ.