ಈ ವಾರ ಬಿಡುಗಡೆಗೊಳ್ಳಲಿರುವ ಸಿನಿಮಾಗಳ ನಡುವೆ ಭಾರೀ ಕುತೂಹಲ ಮೂಡಿಸಿರುವ ಯಾದಿಯಲ್ಲಿ ಮುಂಚೂಣಿಯಲ್ಲಿರೋದು `(saramsha movie) ಸಾರಾಂಶ’. (surya vasista) ಸೂರ್ಯ ವಸಿಷ್ಠ ನಿರ್ದೇಶನ ಮಾಡಿ, ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿರೋ ಚಿತ್ರ ಸಾರಾಂಶ. ಇದರ ಆಂತರ್ಯದಂಥಾ ಬಹುಮುಖ್ಯ ಪಾತ್ರವೊಂದನ್ನು ನಿಭಾಯಿಸಿರುವವರು (deepak subramanya) ದೀಪಕ್ ಸುಬ್ಮಣ್ಯ. ಈಗಾಗಲೇ ದಾಸ ಪುರಂದರ ಎಂಬ ಧಾರಾವಾಹಿಯ ಮೂಲಕ ಭಾರೀ ಪ್ರಸಿದ್ಧಿ ಪಡೆದುಕೊಂಡಿರುವವರು ದೀಪಕ್. ಈ ಯಶದ ಪ್ರಭೆಯಲ್ಲಿಯೇ ಸಿನಿಮಾ ರಂಗಕ್ಕೂ ಪಾದಾರ್ಪಣೆ ಮಾಡಿ, ತಮ್ಮದೇ ಆದೊಂದು ಪಥದಲ್ಲಿ ಮುಂದುವರೆಯುತ್ತಿದ್ದಾರೆ. ಹೊಸತನದ ಪಾತ್ರಕ್ಕಾಗಿ ಹಾತೊರೆಯುತ್ತಾ, ಅಂಥಾದ್ದು ಸಿಕ್ಕಾಗ ಸಾಕಷ್ಟು ತಯಾರಿ ನಡೆಸಿ ಆವಾಹಿಸಿಕೊಳ್ಳೋದು ದೀಪಕ್ ಸುಬ್ರಮಣ್ಯ ಅವರ ಸ್ಪೆಷಾಲಿಟಿ. ಸಾರಾಂಶದ ಪಾತ್ರವಾಗಿ ತಮಗೆ ದಕ್ಕಿದ ಅಮೋಘ ಅನುಭವಗಳನ್ನವರು `ಸಿನಿ ಶೋಧ’ದೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ…
ಈಗಾಗಲೇ ಟ್ರೈಲರ್ ಮೂಲಕ ದೀಪಕ್ ಸುಬ್ರಮಣ್ಯ ನಿಭಾಯಿಸಿರುವ ಪಾತ್ರದ ಒಂದಷ್ಟು ಝಲಕ್ಕುಗಳು ಜಾಹೀರಾಗಿವೆ. ಅಂಥಾದ್ದೊಂದು ಅವಕಾಶ ಬಂದಾಗ ಹಿಂದೆ ಮುಂದೆ ನೋಡದೆ ದೀಪಕ್ ಒಪ್ಪಿಕೊಂಡಿದ್ದರಂತೆ. ಅದಕ್ಕೆ ಕಾರಣಾವಾದದ್ದು ಒಂದಷ್ಟು ವರ್ಷಗಳ ಕಾಲದಿಂದ ಸಾಧ್ಯವಾಗಿದ್ದ ಸೂರ್ಯ ವಸಿಷ್ಠ ಅವರೊಂದಿಗಿನ ಸಾಂಗತ್ಯ. ಒಂದಷ್ಟು ಕಿರುಚಿತ್ರಗಳ ಮೂಲಕ ವಸಿಷ್ಠರ ಕಸುವನ್ನು ಅರ್ಥ ಮಾಡಿಕೊಂಡಿದ್ದವರು ದೀಪಕ್. ಕಥನದ ಶೈಲಿ, ಅದನ್ನು ದೃಷ್ಯವಾಗಿಸಬಲ್ಲ ಛಾತಿಯಲ್ಲಿ ಸೂರ್ಯ ವಸಿಷ್ಠ ಒಂದು ಹೆಜ್ಜೆ ಮುಂದಿದ್ದಾರೆಂಬ ಅರಿವಿದ್ದುದರಿಂದಲೇ ಈ ಪಾತ್ರಕ್ಕವರು ಒಪ್ಪಿಗೆ ಸೂಚಿಸಿದ್ದರಂತೆ.
ಆ ನಂತರ ತಮ್ಮ ಪಾತ್ರದ ಬಗ್ಗೆ ಅರಿವಾಗಿ, ಅದಕ್ಕಾಗಿ ನಡೆಸಿದ್ದ ತಯಾರಿಯದ್ದೇ ಒಂದು ವಿಶಿಷ್ಟ ಅನುಭೂತಿ ಎಂಬುದು ದೀಪಕ್ ಸುಬ್ರಮಣ್ಯ ಮಾತು. ಅವರಿಲ್ಲಿ ತೇಜಸ್ವಿ ಪಂಡಿತ್ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ಅದು ಸಿಎ ಪ್ರೊಫೆಷನ್ನಿನ ಪಾತ್ರ. ಅಂತರ್ಮುಖಿ ಸ್ವಭಾವ ಆ ಪಾತ್ರದ ಹೆಗ್ಗುರುತು. ಹೇಳಿಕೇಳಿ ದೀಪಕ್ ಮಾತುಗಾರರು. ಅಂತರ್ಮುಖಿತ್ವದ ಒಳತೋಟಿಗಳೆಲ್ಲವೂ ಅವರಿಗೆ ಅಪರಿಚಿತ. ನಿಜವಾದ ಕಲಾವಿದರು ತಮ್ಮ ವ್ಯಕ್ತಿತ್ವಕ್ಕೆ ಹೊರತಾದ ಪಾತ್ರಗಳಿಗಾಗಿ ಹಾತೊರೆಯುತ್ತಾರೆ. ಇಂಥಾದ್ದೊಂದು ಪಾತ್ರ ಸಿಕ್ಕಿದ್ದೇ ದೀಪಕ್ ಅಂತರ್ಮುಖಿಯಾಗುವ ಪ್ರಯತ್ನ ಆರಂಭಿಸಿದ್ದರಂತೆ. ಸಿಎಗಳ ದಿನಚರಿಯನ್ನು ಅಭ್ಯಸಿಸಿದ್ದರಂತೆ. ಅದಕ್ಕಾಗಿ ಇಪ್ಪತ್ತಾರು ಕೆಜಿಯಷ್ಟು ತೂಕವನ್ನೂ ಕೂಡಾ ಹೆಚ್ಚಿಸಿಕೊಂಡಿದ್ದರಂತೆ!
ಇಂಥಾ ಅನೇಕ ಸರ್ಕಸ್ಸುಗಳನ್ನು ನಡೆಸಿರುವ ದೀಪಕ್ ಸುಬ್ರಮಣ್ಯ ಆ ಪಾತ್ರವನ್ನು ಆವಾಹಸಿಕೊಂಡಿದ್ದಾರೆ. ಪ್ರತೀ ಪ್ರೇಕ್ಷಕರಿಗೂ ಇಷ್ಟವಾಗುವ, ನೇರಾನೇರ ಎದೆಗಿಳಿಯುವ ಧಾಟಿಯ ಈ ಚಿತ್ರ ದೊಡ್ಡ ಮಟ್ಟ್ದಲ್ಲಿ ಗೆಲ್ಲುತ್ತದೆ, ತನ್ನ ವೃತ್ತಿ ಬದುಕಿನ ದಿಕ್ಕು ಬದಲಾಗುತ್ತದೆಂಬಂಥಾ ಗಾಢ ನಂಬಿಕೆ ದೀಪಕ್ ರಲ್ಲಿದೆ. ದು ನಿಜವಾಗುವ ಕ್ಷಣಗಳು ಇನ್ನೇನು ಹತ್ತಿರಾಗುತ್ತಿವೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪೆÇ?ರಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಸಾರಾಂಶ ಇದೇ ನಾಳೆ ತೆರೆಗಾಣಲಿದೆ.