ತೀರಾ ಹೊಸತೆನ್ನುವಂಥಾ ಸೂಕ್ಷ್ಮ ಕಥಾನಕವನ್ನು ಒಳಗೊಂಡಿರುವ ಚಿತ್ರ (ravike prasanga movie) `ರವಿಕೆ ಪ್ರಸಂಗ’. ಸಿನಿಮಾ ಒಂದನ್ನು ರೂಪುಗೊಳಿಸೋದು ಎಷ್ಟು ಕಷ್ಟದ ವಿಚಾರವೋ, ಅದನ್ನು ವ್ಯವಸ್ಥಿತವಾಗಿ ಪ್ರೇಕ್ಷಕರಿಗೆ ತಲುಪಿಸೋದೂ ಕೂಡಾ ಅಷ್ಟೇ ತ್ರಾಸದಾಯಕ ಸಂಗತಿ. ಈ ಹಾದಿಯಲ್ಲಿ ಪರಿಣಾಮಕಾರಿಯಾಗಿ ಮುಂದಡಿ ಇಡುವ ಸಿನಿಮಾಗಳು ಮಾತ್ರವೇ ಗೆಲ್ಲುತ್ತವೆಂಬಂಥಾ ವಾತಾವರಣವಿದೆ. ಈ ನಿಟ್ಟಿನಲ್ಲಿ ನೋಡೋದಾದರೆ, (director santhosh kodankeri) ಸಂತೋಷ್ ಕೊಡಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಚಿತ್ರದ್ದು ಭಿನ್ನ ಯಾನ. ಯಾಕೆಂದರೆ, ಬಿಡುಗಡೆಗೆ ಕೆಲ ದಿನಗಳು ಮಾತ್ರವೇ ಬಾಕಿ ಇರುವ ಈ ಹೊತ್ತಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಚಿತ್ರತಂಡ ಪ್ರೇಕ್ಷಕರನ್ನು ತಾಕುತ್ತಿದೆ.
ಅದರ ಭಾಗವಾಗಿಯೇ ಇತ್ತೀಚೆಗೆ ದಾವಣಗೆರೆಯ ನಮ್ಮ ಸ್ವದೇಶಿ ಸಂಸ್ಥೆಯಲ್ಲಿ ಚಿತ್ರತಂಡ ವಿಭಿನ್ನವಾಗಿ ಪ್ರಚಾರ ಕಾರ್ಯ ನಡೆಸಿದೆ. ಸೋಲಾರ್, ಯುಪಿಎಸ್ ಮುಂತಾದ ನಾನಾ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಈ ಸಂಸ್ಥೆ ಜನರೆಲ್ಲರ ಪ್ರೀತಿ ಪಾತ್ರವಾಗಿದೆ. ಸ್ವದೇಶಿ ನಿರ್ಮಿತ ಉಪಕರಣಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಸ್ವಾವಲಂಬನೆ ಸಾಧಿಸುವ ಧ್ಯೇಯದೊಂದಿಗೆ ಈ ತಂಡ ಕಾರ್ಯ ನಿರ್ವಹಿಸುತ್ತಿದೆ. ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಇಲ್ಲಿನ ಮುಖ್ಯಸ್ಥರು ಮತ್ತು ಸಿಬ್ಬಂದಿ ರವಿಕೆ ಪ್ರಸಂಗ ಚಿತ್ರತಂಡದೊಂದಿಗೆ ಕಲೆತು ಸಂಭ್ರಮಿಸಿದ್ದಾರೆ. ಈ ಸಂಸ್ಥೆಯ ಮುಖ್ಯಸ್ಥರಾದ ಪ್ರದೀಪ್, ಜಗನ್ನಾಥ್ ಈಶ್ವರ್ ಮತ್ತು ಸಿಬ್ಬಂದಿ ರವಿಕೆ ಪ್ರಸಂಗದ ಅಚ್ಚರಿಗಳಿಗೆ ತೆರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾಯಕಿ ಗೀತಾ ಭಾರತಿ ಭಟ್ ಪ್ರಧಾನ ಆಕರ್ಷಣೆಯಾಗಿದ್ದರು. ಅವರನ್ನು ಸಂಸ್ಥೆಯ ಕಡೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕ ಸಂತೋಷ್ ಕೊಡಂಕೇರಿ ಮತ್ತು ಗೀತಾ ಭಟ್ ರವಿಕೆ ಪ್ರಸಂಗದ ಆಂತರ್ಯದ ಬಗ್ಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು. ಅದು ಈ ಸಂಸ್ಥೆಯವರೆಲ್ಲ ಸಿನಿಮಾ ನೋಡಲು ಕಾತರರಾಗುವಂತೆ ಮಾಡಿದ್ದು ವಿಶೇಷ. ಹೀಗೆ ಈಗಾಗಾಲೇ ಸಂತೋಷ್ ಕೊಡಂಕೇರಿ ಕರ್ನಾಟಕದಾದ್ಯಂತ ಸುತ್ತಾಡುತ್ತಾ, ರವಿಕೆ ಪ್ರಸಂಗದತ್ತ ಪ್ರೇಕ್ಷಕರು ಕಾತರರಾಗುವಂತೆ ಮಾಡುತ್ತಿದ್ದಾರೆ. ಈ ಮೂಲಕ ಬಿಡುಗಡೆಯ ಕ್ಷಣಗಳು ಹತ್ತಿರಾಗುತ್ತಿರುವ ಈ ಹೊತ್ತಿನಲ್ಲಿ ರವಿಕೆ ಪ್ರಸಂಗ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅಂದಹಾಗೆ ಈ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ.
ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಖುಷಿ ಆಚಾರ್, ದರ್ಶಿನಿ, ಹನುಮಂತೇಗೌಡ, ಹನುಮಂತ ರಾವ್, ಆಶಾ ಸುಜಯ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುರಳೀಧರ ಎನ್ ಛಾಯಾಗ್ರಹಣ, ವಿಜಯ್ ಶರ್ಮಾ ಸಂಗೀತ, ರಘು ಶಿವರಾಮ್ ಸಂಕಲನ ವಿರುವ ರವಿಕೆ ಪ್ರಸಂಗಕ್ಕೆ ಶಾಂತನು ಮಹರ್ಶಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್.ವಿ ಸಹ ನಿರ್ಮಾಪಕರಾಗಿ ರವಿಕೆ ಪ್ರಸಂಗವನ್ನು ಚೆಂದಗಾಣಿಸಿದ್ದಾರೆ.