ಕನ್ನಡದ ಬಿಗ್ ಬಾಸ್ (bigboss season10) ಜಾತ್ರೆ ಮುಕ್ತಾಯಗೊಂಡಿದೆ. ಯಥಾಪ್ರಕಾರ ಒಂದಷ್ಟು ಹಳಸಲು ವ್ಯಕ್ತಿತ್ವಗಳು, ಎಳಸು ಕುನ್ನಿಗಳು, ಲೂಸು ಆಸಾಮಿಗಳು ಬಿಗ್ ಬಾಸ್ ಮೈದಾನದ ತುಂಬ ಮೈದಣಿಯೆ ಉರುಳ್ಯಾಡಿ ಸಂಭ್ರಮಿಸಿವೆ. ಕಿಚ್ಚನ ಸಾರಥ್ಯದಲ್ಲಿ (dron prathap) ದ್ರೋಣ್ ಪ್ರತಾಪನಂಥಾ ಪಕ್ಕಾ ಫ್ರಾಡ್ ಕೇಸುಗಳನ್ನು ಹೀರೋನಂತೆ ಬಿಂಬಿಸುವ ಪಕ್ಕಾ ಫ್ಲಾಪ್ ಪ್ಲಾನೂ ಕೂಡಾ ಸಂಪನ್ನಗೊಂಡಿದೆ. ಇದೀಗ ಈ ಸೀಜನ್ನಿನಿಂದ ಆಚೆ ಬಂದ ಅಂಡೆಪಿರ್ಕಿಗಳು ಒಬ್ಬೊಬ್ಬರೂ ಒಂದೊಂದು ಅವತಾರವೆತ್ತುತ್ತಾ ಊರು ತುಂಬಾ ಅಡ್ಡಾಡುತ್ತಿವೆ. ಅವನ್ಯಾರೋ (rakshak bullet) ಬುಲೆಟ್ ರಕ್ಷಕ್ ಸೆಲೆಬ್ರಿಟಿಯೆಂಬೋ ಭ್ರಮೆಯಲ್ಲಿ ಸೆಲ್ಫಿ ಗುಂಗಿನಲ್ಲಿ ಮೆರೆಯುತ್ತಿದ್ದರೆ, ರನ್ನರ್ ಅಪ್ ಆಗಿರುವ ಕಾಗೆ ಪ್ರತಾಪನನ್ನು ಗಿಚ್ಚಿಗಿಲಿಗಿಲಿ ಎಂಬ ಎ ಬ್ರ್ಯಾಂಡಿನ ಶೋಗಾಗಿ ಕ್ಯಾಚು ಹಾಕಿಕೊಳ್ಳಲಾಗಿದೆ!
ಇಂಥಾ ಅದ್ಭುತ ಪ್ರತಿಭೆಗಳ ಮೆರವಣಿಗೆಯ ನಡುವ ಈ ಹುಡುಗಿ ಇಶಾನಿ ಎಲ್ಲಿ ಹೋದಳು? ಅಂತ ಬಹುಶಃ ಯಾರೆಂದರೆ ಯಾರೂ ಹುಡುಕುತ್ತಿರಲಿಕ್ಕಿಲ್ಲ. ಆದರೂ ಅದೇ ಗಿಚ್ಚಿಗಿಲಿಗಿಲಿ ಶೋನಲ್ಲಿ ಈಕೆಯದ್ದೂ ಹಾಜರಿ ಇದೆ. ಇಂಥಾ ಇಶಾನಿ ರ್ಯಾಪರ್ ಆಗಿದ್ದಳೆಂಬ ವಿಚಾರ ಗೊತ್ತಾಗಿದ್ದು, ಕರ್ನಾಟಕದಲ್ಲಿ ಬಹುತೇಕರಿಗೆ ಮುಖ ಪರಿಚಯವಾಗಿದ್ದು ಬಿಗ್ ಬಾಸ್ ವೇದಿಕೆಯ ಮೇಲಷ್ಟೇ. ಆದರೆ,ಪ ಬಿಗ್ ಬಾಸ್ ಮನೆಯೊಪಳಗೆ ಈಕೆ ಕಡಿದು ಕಟ್ಟೆ ಹಾಕಿದ್ದೇನೂ ಇಲ್ಲ. ಇಶಾನಿಯೊಳಗಿನ ಯಾವ ಪ್ರತಿಭೆಯೂ ಆಚೆ ಬರಲಿಲ್ಲವೆಂಬ ಬೇಸರ ಪ್ರೇಕ್ಷಕರಲ್ಲಿ ಇದ್ದೇ ಇತ್ತು. ಆಗಾಗ ರ್ಯಾಪ್ ಹೆಸರಿನ ಶಿಶುಪ್ರಾಸ ಬಿಟ್ಟಿದ್ದು, ಮೈಕೆಲ್ ನೊಂದಿಗಿನ ನಂಟು, ಕಿತ್ತಾಟದಾಚೆಗೆ ಇಶಾನಿ ನೆನಪಲ್ಲುಳಿಯುವಂತೆ ನಡೆದುಕೊಂಡಿರಲಿಲ್ಲ.
ಲೇಟೆಸ್ಟ್ ವಿಚಾರವೆಂದರೆ, ದುಬೈ ಮುಂತಾದ ದೇಶಗಳಲ್ಲಿ ಅಡ್ಡಾಡುತ್ತಾ, ರ್ಯಾಪ್ ಸಾಂಗ್ ಸೃಷ್ಟಿಸುತ್ತಿದ್ದ ಇಶಾನಿ ಈಗ ಕನ್ನಡದಲ್ಲೇ ಒಂದಷ್ಟು ಹವಾ ಸೃಷ್ಟಿಸುವ ಆಲೋಚನೆಯಲ್ಲಿದ್ದಂತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೂ ಆಗಿರುವ ಆಕೆ, ದರ್ಶನ್ ಬರ್ತ್ಡೆಗೆ ವಿಶೇಷವಾದೊಂದು ರ್ಯಾಪ್ ಸಾಂಗಿನ ಉಡುಗೊರೆ ನೀಡಲು ಮುಂದಾಗಿದ್ದಾಳೆ. ದರ್ಶನ್ ಹುಟ್ಟುಹಬ್ಬದ ದಿನವೇ ಅದು ಲಾಂಚ್ ಆಗಲಿದೆ ಎಂಬ ವಿಚಾರವನ್ನು ಸಂದರ್ಶನವೊಂದರಲ್ಲಿ ಜಾಹೀರು ಪಡಿಸಿದ್ದಾಳೆ. ಅದ್ಯಾವ ಥರದ ರ್ಯಾಪ್ ಸಾಂಗ್ ಮಾಡುತ್ತಾಳೋ ಗೊತ್ತಿಲ್ಲ; ಆದರೆ ದರ್ಶನ್ ಅಭಿಮಾನಿ ವಲಯದ ನಡುವೆ ಆ ಸುದ್ದಿ ಸಂಭ್ರಮಿಸುತ್ತಾ ಓಡಾಡುತ್ತಿದೆ.
ಬಿಗ್ ಬಾಸ್ ಮನೆಯೊಳಗೆ ಆಗಾಗ ಪ್ರತಾಪನ ವಿರುದ್ಧ ತಿರುಗಿ ಬೀಳುತ್ತಿದ್ದ ಇಶಾನಿ, ಅತಿಥಿಯಾಗಿ ಮನೆಯೊಳಗೆ ಹೋದಾಗಲೂ ಪ್ರತಾಪನನ್ನು ಕಾಗೆ ಕಕ್ಕ ಅಂತೆಲ್ಲ ಪರೋಕ್ಷವಾಗಿ ಮೂದಲಿಸಿದ್ದಳು. ನಿಜ, ಬೊಗಳೆ ಪ್ರತಾಪನಿಗೆ ಕಾಗೆ ಕಕ್ಕಕ್ಕಿರೋ ಕಿಮ್ಮತ್ತೂ ಇಲ್ಲ. ಆದರೆ, ಈ ಇಶಾನಿ ಕೂಡಾ ಕಾಗೆ ಕಕ್ಕದ ಖಾಸಾ ಅಕ್ಕನಂತಿರುವವಳೆಂಬ ಸತ್ಯವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಇಂಥವೆಲ್ಲ ಬಿಗ್ ಬಾಸ್ ಎಂಬ ಬೂಸಾ ಕಾರ್ಯಕ್ರಮದ ಖೊಟ್ಟಿ ಸೃಷ್ಟಿಗಳಷ್ಟೇ. ಇಂಥಾ ತಗಡು ವ್ಯಕ್ತಿತ್ವಗಳ ಮುಂದೆ ನಿಂತು ಘನ ಗಾಂಭೀರ್ಯದ ಪೋಸು ಕೊಡುವ ಕಿಚ್ಚನ ದೆಸೆಯಿಂದಾಗಿ ತಲೆಬುಡವಿಲ್ಲದ ಆಸಾಮಿಗಳೂ ಸೆಲೆಬ್ರಿಟಿಗಳೆಂಬ ಭ್ರಮೆಯಲ್ಲಿ ಓಡಾಡುವಂತಾಗಿದೆ. ಅದರಲ್ಲಿ ಕಾಗೆ ಕಕ್ಕ ಮತ್ತು ಅವನ ಖಾಸಾ ಅಕ್ಕ ಕೂಡಾ ಪ್ರಧಾನವಾಗಿ ಗುರುತಿಸಿಕೊಳ್ಳುತ್ತಾರೆ!