ಕಿವಿ ಸೋಕಿದಾಕ್ಷಣವೇ ಎದೆಗಿಳಿಯುವ ಹಾಡುಗಳೊಂದಿಗೆ ಸದ್ದು ಮಾಡಿದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿದ ಸಾಕಷ್ಟು ಉದಾಹರಣೆಗಳಿದ್ದಾವೆ. ಸದ್ಯದ ಮಟ್ಟಿಗೆ ಅಂಥಾದ್ದೊಂದು (melodious success) ಮೆಲೋಡಿಯಸ್ ಗೆಲುವು ದಾಖಲಿಸಬಲ್ಲ ಎಲ್ಲ ಲಕ್ಷಣಗಳನ್ನು ಹೊಂದಿರುವ ಚಿತ್ರ (naguvina hugala mele) `ನಗುವಿನ ಹೂಗಳ ಮೇಲೆ’. ಶೀರ್ಷಿಕೆಯಲ್ಲೇ ನವಿರುಭಾವದ ಇಬ್ಬನಿ ಹೊದ್ದುಕೊಂಡಂತಿರುವ ಈ ಚಿತ್ರವನ್ನು ಪ್ರತಿಭಾನ್ವಿತ ನಿರ್ದೇಶಕ (director venkat bharadwaj) ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಕ್ರಿಯೇಟಿವಿಟಿಯ ಮೂಸೆಯಲ್ಲಿ ಬೆರಗಿನ ರೂಪ ಧರಿಸಿಬಿಡಬಲ್ಲ ಮಾಯೆಯಂಥಾದ್ದು ಪ್ರೀತಿ. ಅಂಥಾ ಕಥೆಗಳು ಲೆಕ್ಕವಿಡಲಾರದಷ್ಟು ಬಂದರೂ ಕೂಡಾ, ಸರಿಕಟ್ಟಾದ ನಿರ್ದೇಶಕರ ಬೊಗಸೆಯಲ್ಲದು ಬೆರಗು ಮೂಡಿಸೋದಿದೆ. ಅಂಥಾ ಕಸುವಿನೊಂದಿಗೆ ರೂಪುಗೊಂಡಿರುವ ಈ ಚಿತ್ರ ಇದೇ ಫೆಬ್ರವರಿ 9ರಂದು ತೆರೆಗಾಣಲಿದೆ!
ಈಗಾಗಲೇ ಆಮ್ಲೆಟ್, ಕೆಂಪಿರ್ವೆ ಮುಂತಾದ ಸಿನಿಮಾಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿರುವವರು (director venkat bharadwaj) ವೆಂಕಟ್ ಭಾರದ್ವಾಜ್. ಈ ಕಾರಣದಿಂದಲೇ ಅವರ ಕೈಗೆ ಸಿಕ್ಕ ನಗುವಿನ ಹೂಗಳ ಮೇಲೆ ಚಿತ್ರ ಹೊಸತನಗಳಿಂದ ಮೈ ಕೈ ತುಂಬಿಕೊಂಡಿರುತ್ತದೆಂಬ ಗಾಢ ನಂಬಿಕೆ ಪ್ರೇಕ್ಷಕರಲ್ಲಿ ಮೂಡಿಕೊಂಡಿದೆ. ಈಗಾಗಲೇ ಹಾಡುಗಳು, ಟ್ರೈಲರ್ ಮತ್ತು ಇಂಟರೆಸ್ಟಿಂಗ್ ಎಂಬಂಥಾ ಕೆಲ ವಿಚಾರಗಳಿಂದಾಗಿ ಪ್ರೇಕ್ಷಕರ ನಂಬಿಕೆ ಮತ್ತಷ್ಟು ಬಲಗೊಂಡಿದೆ. ಹಂತ ಹಂತವಾಗಿ, ಎಲ್ಲಿಯೂ ಪ್ರೇಕ್ಷಕನ ಆಸಕ್ತಿ ಮುಕ್ಕಾಗದಂತೆ ಈ ಚಿತ್ರವನ್ನು ಇಲ್ಲಿಯವರೆಗೂ ಕರೆತರಲಾಗಿದೆ. ಇನ್ನು ಚಿತ್ರಮಂದಿರಕ್ಕೆ ಉಳಿದಿರೋದು ಕೆಲವೇ ಗಾವುದ ದೂರ ಮಾತ್ರ. ಹಾಗೆ ಪ್ರೇಕ್ಷಕರೆದುರು ಪ್ರತ್ಯಕ್ಷವಾಗಲಿರೀ ಈ ಸಿನಿಮಾ ಹಾಯೆನಿಸುವ ಮಧುರಾನುಭೂತಿಯನ್ನು ಪ್ರತೀ ನೋಡುಗರೊಳಗೂ ತುಂಬುತ್ತದೆಂಬ ಭರವಸೆ ಚಿತ್ರತಂಡದಲ್ಲಿದೆ.
ಕಥೆ, ಸಂಗೀತ ಮಾತ್ರವಲ್ಲದೇ, ತಾಂತ್ರಿಕವಾಗಿಯೂ ನಗುವಿನ ಹೂಗಳ ಮೇಲೆ ಚಿತ್ರ ಭಿನ್ನವಾಗಿದೆಯಂತೆ. ಈಗಾಗಲೇ ಅದನ್ನು ನೋಡುಗರೆಲ್ಲ ಮೆಚ್ಚಿಕೊಂಡಿದ್ದಾರೆ; ಒಪ್ಪಿಕೊಂಡಿದ್ದಾರೆ. ವಿಶೇಷವೆಂದರೆ, ತೆಲುಗಿನ ಖ್ಯಾತ ನಿರ್ದೇಶಕ ಕೆ.ಕೆ ರಾಧಾ ಮೋಹನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಒಂದಷ್ಟು ಧಾರಾವಾಹಿಗಳ ಮೂಲಕ ಗುರುತಾಗಿರುವ (abhidas) ಅಭಿ ದಾಸ್ ನಾಯಕನಾಗಿ ನಟಿಸಿದ್ದಾರೆ. ಮಾಡೆಲಿಂಗ್ ಮಾತ್ರವಲ್ಲದೇ, ಸೀರಿಯಲ್ ಮೂಲಕವೂ ಹೆಸರಾಗಿರುವ (sharanya shetty) ಶರಣ್ಯಾ ಶೆಟ್ಟಿ ನಾಯಕಿಯಾಗಿ ಜೊತೆಗೂಡಿದ್ದಾರೆ. ಇದು ಶರಣ್ಯಾ ಪಾಲಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಮೊದಲ ಚಿತ್ರ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನದೊಂದಿಗೆ ನಗುವಿನ ಹೂಗಳ ಮೇಲೆ ಕಳೆಗಟ್ಟಿಕೊಂಡಿದೆ.