ತೆಲುಗು ನಟ ಪ್ರಭಾಸ್ (acor prabhas) ಪ್ಯಾನಿಂಡಿಯಾ ಸ್ಟಾರ್ ಆಗಿ ಒಂದಷ್ಟು ವರ್ಷಗಳೇ ಕಳೆದಿವೆ. ಆದರೆ, ಆ ಮಹಾ ಗೆಲುವನ್ನು ಸರಿಕಟ್ಟಾಗಿ ಸಂಭಾಳಿಸೋದರಲ್ಲಿ ಮಾತ್ರ ಆತ ಪದೇ ಪದೆ ಮುಗ್ಗರಿಸುತ್ತಿದ್ದಾರೆ. ಬಾಹುಬಲಿಯಿಂದ (bahubali movie) ದಕ್ಕಿದ್ದ ಮಹಾ ಗೆಲುವು, ಸಾಲು ಸಾಲು ಸೋಲುಗಳ ಶೂಲಕ್ಕೆ ಸಿಕ್ಕು ಹೈರಾಣುಗೊಂಡಿದೆ. ದೇಶವ್ಯಾಪಿ ಅಭಿಮಾಇ ಬಳಗ ಹೊಂದಿರೋ ಪ್ರಭಾಸ್ ಯಾಕೆ ಹೀಗಾದರು? ಆತ ಎಡವುತ್ತಿರೋದೆಲ್ಲಿ? ಇತ್ತೀಚೆಗೆ ಅಸಲೀ ಚಹರೆ ಬದಲಿಸಿ ವಿರೂಪಗೊಳ್ಳುತ್ತಿರೋ ಆತನ ಮುಖದ ಹಿಂದಿರೋ ಅಸಲೀಯತ್ತೇನು? ಇಂಥಾ ಹತ್ತಾರು ಪ್ರಶ್ನೆಗಳು ಖುದ್ದು ಅಭಿಮಾನಿ ಬಳಗವನ್ನೇ ಮುತ್ತಿಕೊಂಡು ಬಿಟ್ಟಿವೆ!
ಹಾಗೆ ನೋಡಿದರೆ, ಪ್ರಭಾಸ್ ಅತೀ ಕೆಟ್ಟ ಸಿನಿಮಾಗಳಲ್ಲಿ ನಟಿಸಿದರೂ ಭರ್ಜರಿ ಓಪನಿಂಗ್ ಸಿಗುತ್ತದೆ. ಹಾಕಿದ ಬಂಡವಾಳದ ಬಾಬತ್ತು ಸೀಸಾಗಿ ವಾಪಾಸಾಗುತ್ತದೆ. ಆದ ಕಾರಣ, ಹಣ ಹೂಡಿದ ಯಾರೊಬ್ಬರೂ ಈವರೆಗೂಲುಕ್ಸಾನು ಮಾಡಿಕೊಂಡಿಲ್ಲ. ಅಕ್ಕೆ ಕಾರಣವಾಗಿರೋದು ಅಭಿಮಾನಿಗಳ ಅತೀವ ಪ್ರೀತಿ. ಅಂಥಾ ಪುಣ್ಯವೊದನ್ನು ಯಾಕೆ ಪ್ರಭಾಸ್ ತಾನೇ ತಾನಾಗಿ ಹಾಳುಗೆಡವುತ್ತಿದ್ದಾರೋ ತಿಳಿಯುತ್ತಿಲ್ಲ.
ಇದೆಲ್ಲದಕ್ಕೆ ಕಾರಣವೇನು ಅಂತ ಹುಡುಕ ಹೋದರೆ, ಆ ನಟನ ಆಪ್ತ ಮೂಲಗಳಿಂದಲೇ ಗಂಭೀರವಾದೊಂದು ಸತ್ಯ ಜಾಹೀರಾಗುತ್ತೆ. ಬಾಹುಬಲಿಯ ನಂತರದಲ್ಲಿ ಸಾಹೋ ಅಂತೋಂದು ಸಿನಿಮಾ ಬಂದಿತ್ತಲ್ಲಾ? ಆ ಚಿತ್ರದ ಹೀನಾಯ ಸೋಲಿನ ನಂತರದಲ್ಲಿ ಪ್ರಭಾಸ್ ನೆಮ್ಮದಿ ಹಾಳಾಗಿದೆ. ಒಂದು ಕಡೆಯಿಂದ ಸ್ನೇಹಕ್ಕೆ ಕಟ್ಟುಬಿದ್ದ ಪ್ರಭಾಸ್ ಯಾರ್ಯಾರಿಗೋ ಕಾಲ್‍ಶೀಟು ಕಿತ್ತು ಕೊಡುತ್ತಿದ್ದಾರೆ. ಅದರ ಫಲವಾಗಿಯೇ ಆದಿಪುರುಷನಂಥಾ ಕಾಮಿಡಿ ಸಿನಿಮಾಗಳ ಭಾಗವಾಗುತ್ತಾ ಬಂದಿದ್ದಾರೆ. ಇಂಥಾ ಸೋಲಿನ ಪರ್ವ ಎಂಬುದು ಪ್ರಭಾಸ್ ರನ್ನು ನಶೆಯ ತೆಕ್ಕೆಗೆ ಕೆಡವಿದೆ ಅಂತ ರೂಮರುಗಳೆದ್ದಿವೆ.
ಒಂದು ಕಾಲದಲ್ಲಿ ಆ ಕ್ಷಣದ ಮೋಜಿಗೆ ಪ್ರಭಾಸ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರಂತೆ. ಸಿನಿಮಾ ಜಗತ್ತಿನಲ್ಲಿ ಅಂಥಾ ಹೈ ಫೈ ಪಾರ್ಟಿಗಳು ಆಯೋಜನೆಗೊಳ್ಳೋದು, ನಶೆಯಲ್ಲಿ ಮಿಂದೇಳೋದು ಕಾಮನ್. ಆದ್ರೆ, ಯಾವಾಗ ಸೋಲು ಸುತ್ತಿಕೊಳ್ಳಲರಂಭಿಸಿತೋ, ಆ ಕ್ಷಣದಿಂದ ಪ್ರಭಸ್ ಗೆ ನಶೆ ಎಂಬುದು ಚಟವಾಗಿ ಬಿಟ್ಟಿದೆ ಅನ್ನುವವರಿದ್ದಾರೆ. ಇತ್ತೀಚೆಗೆ ಪ್ರಭಾಸ್ ಅವರ ವಿಕಾರಗೊಂಡ ಮುಖದ ಫೋಟೋಗಳು ಹರಿದಾಡುತ್ತಿವೆ. ಅದರ ಹಿಂದೆಯೂ ಮತ್ತದೇ ಡ್ರಗ್ಸ್ ಕಿಸುರಿದೆ ಎಂಬ ಸುದ್ದಿಯೂ ಹಬ್ಬಿಕೊಂಡಿದೆ.
ಸದ್ಯಕ್ಕೆ ಪ್ರಭಾಸ್ ಮುಂದಿರುವ ಏಕೈಕ ಹೋಪ್ ಅಂದರೆ ಸಲಾರ್ ಮಾತ್ರ. ಆದರೆ, ಅದರ ಬಗ್ಗೆಯೂ ಒಂದಷ್ಟು ನೆಗೆಟಿವ್ ವಿಚಾರಗಳು ಹಬ್ಬಿಕೊಳ್ಳುತ್ತಿವೆ. ಪದೇ ಪದೆ ರಿಲೀಸ್ ಡೇಟು ಮುಂದಕ್ಕೆ ಹೋಗುತ್ತಿರೋದರ ಸುತ್ತ ಒಂದಷ್ಟು ಗಾಸಿಪ್ಪುಗಳು ಹಬ್ಬಿಕೊಳ್ಳುತ್ತಿವೆ. ಇದೆಲ್ಲದರಾಚೆಗೆ ಸಲಾರ್ ಚೆಂದಗಿದ್ದರೆ ಪ್ರಭಾಸ್ ಕೊಂಚ ಉಸಿರಾಡುವಂತಾಗುತ್ತೆ. ಅದೆಲ್ಲದಕ್ಕೂ ಮುಂಚೆ ಈ ನಟ ನಶೆಯ ಮೋಹವನ್ನು ಕಳಚಿಕೊಂಡು ನಿಲ್ಲುವ ಜರೂರತ್ತಿದೆ!