ಅತ್ತ ಜೀವದಂತೆ ಹಚ್ಚಿಕೊಂಡಿದ್ದ ಅಣ್ಣ (chiarnjeevi sraja) ಚಿರು, ನಡುದಾರಿಯಲ್ಲೇ ಇನ್ನಿಲ್ಲವಾದ ಸಂಕಟ, ಇತ್ತ ಆ ದುಖಃವನ್ನು ಎದೆಯಲ್ಲಿಟ್ಟುಕೊಂಡೇ ವೃತ್ತಿ ಬದುಕನ್ನು ಸಂಭಾಳಿಸಿಕೊಳ್ಳುವ ಸವಾಲು… ಇವೆರಡನ್ನು ಸರಿದೂಗಿಸಿಕೊಳ್ಳಲು ಈ ಕ್ಷಣಕ್ಕೂ ಪ್ರಯಾಸ ಪಡುತ್ತಿರುವವರು (action prince dhruva sarja) ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಬಹುಶಃ ಯಾರೇ ಆದರೂ ಇಂಥಾದ್ದೊಂದು ಅಗ್ನಿ ಪರೀಕ್ಷೆಯನ್ನು ಎದುರಿಸೋದು ಕಡುಗಷ್ಟದ ಕೆಲಸ. ಒಂದು ಮಟ್ಟಿಗೆ ಎಲ್ಲ ನೋವನ್ನೂ ನುಂಗಿಕೊಂಡಂತೆ ಧ್ರುವ ಪುಟಿದೆದ್ದಿದ್ದಾರೆ. ಅದರ ಫಲವಾಗಿಯೇ ಈಗ ಬಹು ನಿರೀಕ್ಷಿತ ಚಿತ್ರ (martin movie) ಮಾರ್ಟಿನ್, ಮಹಾ ಗೆಲುವೊಂದಕ್ಕೆ ಮುಹೂರ್ತವಿಟ್ಟಿದೆ!
ಧ್ರುವ ಸರ್ಜಾ ಸಿನಿಮಾಗಳೆಂದರೆ, ಕಡಿಮೆಯೆಂದರೂ ಎರಡು ವರ್ಷ ಬೇಕೇ ಬೇಕು ಎಂಬಂಥಾ ವಾತಾವರಣವಿದೆ. ಖುದ್ದು ಧ್ರುವ ಅದನ್ನು ಮೀರಿಕೊಳ್ಳಲು ಪ್ರಯತ್ನಿಸಿದರೂ, ಒಂದಲ್ಲ ಒಂದು ರೀತಿಯಲ್ಲಿ ಅಡೆತಡೆಗಳು ಎದುರಾಗಿ ಬಿಡುತ್ತವೆ. ಒಂದು ಹಂತದಲ್ಲಿ ಖುದ್ದ ಅಂಬರೀಶ್ ವರ್ಷಕ್ಕೊಂದು ಸಿನಿಮ ಮಾಡಯ್ಯಾ ಅಂತ ನಯವಾಗಿ ಗದರಿದ್ದಿದೆ. ಅದೆಲ್ಲದರಾಚೆಗೆ ಮಾರ್ಟಿನ್ ವಿಚಾರದಲ್ಲಿಯೂ ಆ ಸಂಪ್ರದಾಯ ಯಥಾ ಪ್ರಕಾರ ಮಂದುವರೆದಿದೆ.
ಆದರೂ ಕೂಡಾ ಧ್ರುವ ಸರ್ಜಾ ಅಭಿಮಾನಿಗಳು ನಿರಾಶರಾಗಬೇಕಿಲ್ಲ. ಯಾಕೆಂದರೆ, ಈಗಾಗಲೇ ಮಾರ್ಟಿನ್ ಗೆ ಮಹಾ ಗೆಲುವು ದಕ್ಕೋದು ಪಕ್ಕಾ ಎಂಬಂಥಾ ವಾತಾವರಣ ಎಲ್ಲೆಡೆ ಹಬ್ಬಿಕೊಂಡಿದೆ. ಸ್ವತಃ ಧ್ರವಾಗೂ ಅಂಥಾದ್ದೊಂದು ಅಚಲ ನಂಬಿಕೆ ಇದೆ. ನಿರ್ದೇಶಕ ಎ.ಪಿ ಅರ್ಜುನ್ ಅಂಥಾದ್ದೊಂದು ವಿಭಿನ್ನ ಕಥೆ, ನಿರೂಪಣೆಯೊಂದಿಗೆ ಈ ಇತ್ರವನ್ನು ರೂಪಿಸಿರೋದು ಈಗಾಗಲೇ ಸಾಬೀತಾಗಿದೆ.
ಏಪ್ರಿಲ್ ನಲ್ಲಿ ಮಾರ್ಟಿನ್ ತೆರೆಗಾಣೋದು ಗ್ಯಾರೆಂಟಿ. ಅದಕ್ಕೆ ಬೇಕಾದ ಎಲ್ಲ ತಯಾರಿಗಳೂ ನಡೆಯುತ್ತಿವೆ. ಸದ್ಯಕ್ಕೆ ಒಂದೆರಡ ಹಾಡುಗಳ ಚಿತ್ರೀಕರಣ ಮಾತ್ರವೇ ಬಾಕಿ ಉಳಿದುಕೊಂಡಿದೆ.ಸಾಮಾನ್ವಾಗಿ ಯಾವುದೇ ಸಿನಿಮಾದ ಬಗೆಗಾದರೂ ಗಾಂಧಿನಗರದಲ್ಲಿ ಏಳುವ ಗುಲ್ಲುಗಳು ನಿರ್ಣಾಯಕವಾಗಿರುತ್ತವೆ. ಮಾರ್ಟಿನ್ ವಿಚಾದಲ್ಲಿಅದೂ ಕೂಡಾ ಪಕ್ಕಾ ಪಾÀಸಿಟಿವ್ ಆಗಿದೆ. ಎಲ್ಲೂ ಅಂದುಕೊಂಡಂತೆಯೇ ನಡೆದರೆ, ಈ ವರ್ಷದ ಅಂಚಿನಲ್ಲಿ ಧ್ರುವ ಅಭಿಮಾನಿಗಳಿಗೆ ಹಬ್ಬವಾಗೋದು ಖರೇ!