ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದ ನವಿರು ಪ್ರೇಮ ಕಥಾನಕ (sapta sagaradache ello) ಸಪ್ತ ಸಾಗರದಾಚೆ ಎಲ್ಲೋ… ಯಾವ ಅಬ್ಬರವೂ ಇಲ್ಲದೆ, ಗಟ್ಟಿಯಾದ ಪ್ರೇಮ ಕಥಾನಕದ ಮೂಲಕ ಈ ಸಿನಿಮಾ ಪೇಕ್ಷಕರನ್ನು ತಾಕಿದ ಪರಿಯೇ ಸಮ್ಮೋಹಕ. ಇದರೊಂದಿಗೆ ಅದ್ಯಾವುದೋ ನೋವಿನ ಕುಲುಮೆಯಲ್ಲಿ ಬೇಯುತ್ತಿರುವ (simple star rakshith shetty) ರಕ್ಷಿತ್ ಪಾಲಿಗೆ ನಿರಾಳತೆಯೊಂದು ಇಡಿಯಾಗಿ ದಕ್ಕಿದೆ. ಸಿನಿಮಾ ಚೌಕಟ್ಟಿನಲ್ಲಿ ಸದಾ ತಾಜಾತನ ಉಳಿಸಿಕೊಳ್ಳು ಮಾಯೆ ಪ್ರೀತಿ ಅದನ್ನು ಮತ್ತೊಂದು ಮಜಲಿನಲ್ಲಿ, ಮತ್ತಷ್ಟು ತಾಜಾತನದೊಂದಿಗೆ ಸಿನಿಮಾವಾಗಿಸುವ ಮೂಲಕ (director hemanth rao) ನಿರ್ದೇಶಕ ಹೇಮಂತ್ ರಾವ್ ಗೆದ್ದಿದ್ದಾರೆ. ಗೆಲವಿನ ಪ್ರಭೆಯಲ್ಲಿಯೇ ಪ್ರೇಕ್ಷಕರು (sse side b) ಸಪ್ತಸಾಗರದ ಸೈಡ್ ಬಿಗಾಗಿ ಕಾದು ಕೂತಿದ್ದರು. ಅಂಥಾ ನಿರೀಕ್ಷೆಯಲ್ಲಿರುವವರಿಗೆ ಕೊಂಚ ನಿರಾಸೆಯ ಸುದ್ದಿಯೊಂದು ಇದೀಗ ಜಾಹೀರಾಗಿದೆ!
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಬಿಡುಗಡೆಯಾಗಿ ತಿಂಗಳಾಗುತ್ತಾ ಬಂದಿದೆ. ಮೊದಲ ಭಾಗದ ಬಿಡುಗಡೆಯ ಅಂಚಿನಲ್ಲಿ ಚಿತ್ರತಂಡ ಸೈಡ್ ಬಿ ಬಗ್ಗೆ ಅನೌನ್ಸ್ ಮಾಡೋ ಮೂಲಕ ಅಚ್ಚರಿ ಮೂಡಿಸಿತ್ತು. ಅದರನ್ವಯ ಇದೇ ತಿಂಗಳ ಇಪ್ಪತ್ತೇಳರಂದು ಸೈಡ್ ಬಿ ತೆರೆಗಾಣಬೇಕಿತ್ತು. ಬಹುಶಃ ಸೈಡ್ ಎ ನೋಡಿದ ಬಹುತೇಕ ಪ್ರೇಕ್ಷಕರು ಇಪ್ಪತ್ತೇಳನೇ ತಾರೀಕಿನತ್ತ ಕಣ್ಣಿಟ್ಟು ಕಾದು ಕೂತಿದ್ದರು. ಆದರೆ, ಕಡೇ ಘಳಿಗೆಯಲ್ಲಿ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಪೋಸ್ಟ್ ಫೋನ್ ಮಾಡಿದ ಸುದ್ದಿ ಬಂದಿದೆ. ಹಾಗಾದರೆ, ಸೈಡಿ ಬಿ ಕಥೆಯೇನು? ಅದ್ಯಾವಾಗ ಬಿಡುಗಡೆಯಾಗುತ್ತೆ ಎಂಬಿತ್ಯಾದಿ ಪ್ರಶ್ನೆಗಳೇಳೋದು ಸಹಜ. ಒಂದು ಮೂಲದ ಪ್ರಕಾರ ನವೆಂಬರ್ ತಿಂಗಳಲ್ಲಿ, ದೀಪಾವಳಿಯ ಹಿಂಚುಮುಂಚಿನಲ್ಲಿ ಸೈಡ್ ಬಿ ನೋಡೋ ಭಾಗ್ಯ ಸಿಗಲಿದೆ.
ಈ ತಿಂಗಳ ಇಪ್ಪತ್ತೇಳರಂದು ದೊಡ್ಡ ಸಿನಿಮಾಗಳ ನಡುವೆ ಪೈಪೋಟಿ ಇದೆ. ಪರಭಾಷಾ ಚಿತ್ರಗಳಿಗೆ ಮಣೆ ಹಾಕಿದರೆ, ಥಿಯೇಟರ್ ಸಮಸ್ಯೆ ಕೂಡಾ ಕಾಡಲಿದೆ. ಅಂಥಾ ಇಕ್ಕಟ್ಟಿನಲ್ಲಿ ಗುದ್ದಾಡಿ ಕಳೆದು ಹೋಗುವ ಬದಲು, ಸರಿಕಟ್ಟಾದ ಮುತೂರ್ತ ನೋಡಿ ತೆರೆಗೆ ಬರಲು ಚಿತ್ರತಂಡ ತೀರ್ಮಾನಿಸಿದಂತಿದೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಸೈಡ್ ಎ ಕ್ಲಾಸ್ ಶೈಲಿಯಲ್ಲಿ ಜನರನ್ನು ಸೆಳೆದಿತ್ತು. ಕ್ಲೈಮ್ಯಾಕ್ಷಿನಲ್ಲಿ ಸೈಡ್ ಬಿಯ ಒಂದಷ್ಟು ಝಲಕ್ಕುಗಳನ್ನು ಚಿತ್ರತಂಡ ಕಾಣಿಸಿತ್ತು. ಅದರಲ್ಲಿ ಪಕ್ಕಾ ಮಾಸ್ ಕಂಟೆಂಟಿನ ಕುರುಹುಗಳಿದ್ದವು. ಈವತ್ತಿಗೆ ಸೈಡ್ ಬಿ ಬಗ್ಗೆ ಅಗಾಧ ಕೌತುಕ ಮೂಡಿಕೊಂಡಿದ್ದರ ಹಿಂದೆ ಆ ಮಾಸ್ ಮಾಯೆ ಕೆಲಸ ಮಾಡಿರೋದು ಸುಳ್ಳಲ್ಲ. ಒಟ್ಟಾರೆಯಾಗಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿರೋದರಿಂದ ಒಂದಷ್ಟು ಪ್ರೇಕ್ಷಕರಿಗೆ ಭ್ರಮನಿರಸನ ವಾಗಿರೋದಂತೂ ಸತ್ಯ!