ಇದು ಹೇಳಿಕೇಳಿ ಆನ್ ಲನ್ ಯುಗ. ಪ್ರತಯೊಬ್ಬರೂ ತಮ್ಮೊಳಗಿನ ಪ್ರತಿಭೆಯನ್ನು ತೋರ್ಪಡಿಸಿಕೊಳ್ಳಲು ಈಗ ಯಾರ ಮರ್ಜಿಗೂ ಕಾಯಬೇಕಿಲ್ಲ. ಒಂದು ವೇಳೆ ಇದನ್ನು ಸಭ್ಯತೆಯ ಪರಿಧಿಯಲ್ಲಿ ಬಳಸಿಕೊಂಡಿದ್ದರೆ, ಈವತ್ತಿಗೆ ಆನ್‍ಲೈನ್ (online foltforme) ಜಗತ್ತು ಒಂದಷ್ಟು ಘನತೆ, ಗೌರವ ಉಳಿದುಕೊಂಡಿರುತ್ತಿತ್ತು. ದುರಂತವೆಂದರೆ, ಆ ಜಗತ್ತಿನಲ್ಲೀಗ ಕೀಳು ಅಭಿರುಚಿಯ ಅಗ್ನಿ ನಿಗಿನಿಗಿಸುತ್ತಿದೆ. ಅದರ ಒಡಲೊಳಗೆ ಕ್ರಿಯೇಟಿವಿಟಿ ಂಬುದು ಅನುಕ್ಷಣವೂ ಬೇಯುತ್ತಿದೆ. ಬೇರೆಲ್ಲರ ಕಥೆ ಹಾಗಿರಲಿ; ಸೋಕಾಲ್ಡ್ ಸೆಲೆಬ್ರಿಟಿಗಳೆನ್ನಿಸಿ ಕೊಂಡವರೇ ಆನ್ ಲೈನ್ ಪ್ಲಾಟ್ ಫಾರ್ಮ್ ಅನ್ನು ಹಾದರದ ಅಡ್ಡೆಯಾಗಿಸಿದ್ದಾರೆ. ಹಾಗೆ ಮಾನ ಮರ್ಯಾದೆಗಳನ್ನು ಅಡ್ಡಡ್ಡ ಮಲಗಿಸಿ, ಅದರ ಎದೆ ಮೇಲೆ ಹರುಕು ಬಟ್ಟೆ ತೊಟಟು ಮೆರೆಯುವವರು ಅನೇಕರಿದ್ದಾರೆ. ಅವರೆಲ್ಲರ ಅಧಿನಾಯಕಿಯಂತಿರುವಾಕೆ (urfi javed) ಉರ್ಫಿ ಜಾವೇದ್!
ಅತ್ತ ನಟಿಯೂ ಅಲ್ಲದ, ಇತ್ತ ಮಾಡೆಲ್ಲೂ ಅಲ್ಲದ ಎಡಬಿಡಂಗಿಯಂತವಳು ಉರ್ಫಿ. ಪ್ರಚಾರಕ್ಕಾಗಿ ಎಂಥಾ ದರಿಧ್ರ ಮಟ್ಟಕ್ಕಿಳಿಯಬಹುದು ಅನ್ನೋದಕ್ಕೆ ಈಕೆಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಒಂದಷ್ಟು ಟೀವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು, ಅದನ್ನೇ ಆನ್ ಲೈನ್ ಎಂಟ್ರಿಗೆ ದಾಳವಾಗಿ ಬಳಸಿಕೊಂಡಿದ್ದಾಕೆ ಉರ್ಫಿ ಜಾವೇದ್. ಅಲ್ಲಿ ಪ್ರತಿಭೆಯನ್ನು ಪಣಕ್ಕೊಡ್ಡಿಕೊಂಡು ಬೆಳೆದಿದ್ದರೆ ಯಾವ ತಕರಾರುಗಳೂ ಇರುತ್ತಿರಲಿಲ್ಲ. ಆದರೆ, ಆಕೆ ಚಿತ್ರವಿಚಿತ್ರ ದಿರಿಸುಗಳನ್ನು ಧರಿಸುತ್ತಾ, ಅಂಗಾಂಗ ಪ್ರದರ್ಶಿಸುತ್ತಲೇ ಪ್ರವರ್ಧಮಾನಕ್ಕೆ ಬರಲಾರಂಭಿಸಿದ್ದಳು. ಈ ಮೂಲಕ ಒಂದಷ್ಟು ಪಡ್ಡೆಗಳ ಅಭಿಮಾನಿ ಬಳಗವನ್ನು ಸಂಪಾದಿಸಿದಳು. ಹೊಸಾ ವಿಚಾರವೆಂದರೆ, ಒಂದು ಪ್ರಸಿದ್ಧ ವೇದಿಕೆಯಲ್ಲಿಯೇ ಇಂಥಾ ಆಟಗಳ ಹಿಂದಿರುವ ಅಸಲೀಯತ್ತನ್ನು ಉರ್ಫಿ ಜಾಹೀರು ಮಾಡಿದ್ದಾಳೆ.
ಮುಂಬೈನಲ್ಲಿ ನಡೆದ ಇಂಡಿಯಾ ಟುಡೆ ಕಾಂಕ್ಲೇವ್ ನಲ್ಲಿ ಉರ್ಫಿ ಮನ ಬಿಚ್ಚಿ ಮಾತಾಡಿದ್ದಾಳೆ. ವೀವ್ಸ್ ಮತ್ತು ಹೆಚ್ಚೆಚ್ಚು ಕಾಸು ಮಾಡುವ ಉದ್ದೇಶದಿಂದಲೇ ದೇಹ ಪ್ರದರ್ಶನ ಮಾಡುತ್ತಿರೋದಾಗಿ ಒಪ್ಪಿಕೊಂಡಿದ್ದಾಳೆ. ಇದಕ್ಕಿಂತ ದುರಂತ ಬೇರೇನಿರಲು ಸಾಧ್ಯ? ಉರ್ಫಿಯಂಥಾ ಅರೆಬೆಂದ ನಟಿಯರಿಂದ ಮತ್ತೊಂದಷ್ಟು ಎಳಸು ಹುಡುಗಿಯರೂ ಕೂಡಾ ಅದೇ ಹಾದಿ ಹಿಡಿದಿದ್ದಾಳೆ. ಕರ್ನಾಟಕದ ಮಟ್ಟಿಗೆ ಸದ್ಯ ಉರ್ಫಿಯ ಪಟ್ಟದ ಶಿಷ್ಯೆಯಂತಿರುವಾಕೆ ಸೋನು ಗೌಡ. ಆರಂಭದಿಂದಲೂ ಚೆಂಗಲು ಆಟಗಳ ಮೂಲಕವೇ ಸುದ್ದಿಯಾಗಿದ್ದ ಸೋನು, ಇತ್ತೀಚೆಗೆಡ ಮಾಲ್ಡೀವ್ಸ್ ಗೆ ತೆರಳಿ, ದೇಹ ಪ್ರದರ್ಶನ ಮಾಡಿದ್ದಳು. ಅದಕ್ಕೆ ಮಿಲಿಯನ್ನುಗಟ್ಟಲೆ ವೀಕ್ಷಣೆಯ ಇನಾಮು ಸಿಕ್ಕಿತ್ತು. ಯಾವ ಪ್ರತಿಭೆಯೂ ಇಲ್ಲದೆ, ದೇಹವೊಂದನ್ನೇ ನೆಚ್ಚಿಕೊಂಡಿರುವ ಇಂಥಾ ಅಡ್ಡಕಸುಬಿಗಳಿಗೆ ಅದೇನನ್ನಬೇಕೋ ತಿಳಿಯುತ್ತಿಲ್ಲ!