ತಲೈವಾ ರಜನೀಕಾಂತ್ (rajanikanth movie) ಅಭಿನಯದ ಜೈಲರ್ ಹಂಗಾಮ ಸುಸೂತ್ರವ್ರಾಗಿ ಮುಂದುವರೆದಿದೆ. ವಾರದಿಂದ ವಾರಕ್ಕೆ ಅದರ ಖದರ್ ಏರುಗತಿ ಕಾಣುತ್ತಿದೆಯ ಹೊರತು, ಇಳಿಕೆಯತ್ತ ಮುಖ ಮಾಡುತ್ತಿಲ್ಲ. ಕಬಾಲಿ (kabaali movie) ನಂತರದಲ್ಲಿ ಆವರಿಸಿಕೊಂಡಿದ್ದ ಶುಷ್ಕ ವಾತಾವರಣವನ್ನು ದಾಟಿಕೊಳ್ಳಲು ರಜನಿ ಸದಾ ಹಂಬಲಿಸುತ್ತಿದ್ದರು. ಬಾಕ್ಸಾಫೀಸ್ ಕಲೆಕ್ಷನ್ನು ಕೂಡಾ ಅತ್ಯಂತ ಭದ್ರವಾಗಿಯೇ ಮುಂದುವರೆಯುತ್ತಿದೆ. ಪ್ರಸ್ತುತ ವಾತಾವರಣವನ್ನು ಆಧರಿಸಿ ಹೇಳೋದಾದರೆ, ಜೈಲರ್ (jailer movie total collection) ಜಾತ್ರೆ ಸದ್ಯಕ್ಕೇನೂ ಮುಗಿಯುವಂತೆ ಕಾಣಿಸುತ್ತಿಲ್ಲ. ಇದೇ ಹೊತ್ತಿನಲ್ಲಿ ಈ ಸಿನಿಮಾ ಮಾಡಿರುವ ಒಟಾರೆ ಕಲೆಕ್ಷನ್ನು ಎಷ್ಟು ಅಂತೊಂದು ಕುತೂಹಲ ಬೆರೆತ ಪ್ರಶ್ನೆ ಬಹುತೇಕರಲ್ಲಿದೆ. ಜೈಲರ್ ಬಿಡುಗಡೆಯಾಗಿ ಹದಿನೆಂಟು ದಿನ ತುಬುವ ಹೊತ್ತಿಗೆಲ್ಲ ಆ ಬಗೆಗಿನ ನಿಖರ ಲೆಕ್ಕಾಚಾರವೊಂದು ಜಾಹೀರಾಗಿದೆ!
ಇದೀಗ ಜೈಲರ್ ಬಿಡುಗಡೆಗೊಂಡು ಹದಿನೆಂಟನೇ ದಿನ ಹೊರಳಿಕೊಂಡಿದೆ. ಬಿಡುಗಡೆಯಾದ ದಿನವೇ ಇದಕ್ಕೆ ತಮಿಳುನಾಡು ಸೇರದಂತೆ ಎಲ್ಲಡೆಯೂ ಭಾರೀ ಓಪನಿಂಗ್ ಸಿಕ್ಕಿಬಿಟ್ಟಿತ್ತು. ಭಾನುವಾರದ ಹೊತ್ತಿಗೆಲ್ಲ 577 ಕೋಟಿ ಒಟಟಾರೆ ಕಲೆಕ್ಷನ್ನು ಮಾಡಿದ್ದ ಜೈಲರ್ ಜೋಳಿಗೆಯಲೀಗ ಭರ್ತಿ ಆರುನಮೂರು ಕೋಟಿ ತುಂಬಿ ತುಳುಕುತ್ತಿದೆ. ಈ ಕ್ಷಣಕ್ಕೆ ಜೈಲರ್ ಸಡನ್ನಾಗೊಂದು ಚಂದ್ರಯಾನ ಹೋಗಿ ಬರುವಷ್ಟ ಶ್ರೀಮಂತನಾಗಿ ಬಿಟ್ಟಿದ್ದಾನೆ. ತಮಿಳುನಾಡು, ಆಂಧ್ರ, ಕರ್ನಟಕ ಮತ್ತು ಕೇರಳಗಳಲಿ ಜೈಲರ್ ಒಂದೇ ಥರದ ಆವೇಗದೊಂದಿಗೆ ಮೂರನೇ ವಾರ ದಾಟಿಕೊಂಡಿದೆ. ಇನ್ನೊಂದು ವಾರ ಮಗುಚಿಕೊಳ್ಳುವಷ್ಟರಲ್ಲಿ ಇನ್ನೊಂದಷ್ಟು ಕೋಟಿಗಳು ಜೈಲರ್ ಖಾತೆಗೆ ತಮೆಯಾಗಲಿವೆ.
ಇನ್ನು ರಾಜ್ಯವರು ಲೆಕಾಚಾರಕೆ ಬರೋದಾದರೆ, ಜೈಲರ್ ತಮಿಳುನಾಡೊಂದರಲ್ಲೇ 180 ಕೋಟಿ ಬಾಚಿಕೊಂಡಿದೆ. ಕರ್ನಾಟಕದಲಿ 62 ಕೋಟಿ, ಕೇರಳದಲ್ಲಿ 52 ಕೋಟಿ ಸೇರಿದಂತೆ ಭಾರದಾದ್ಯಂತ ಹತ್ತತ್ತಿರ ನಾನೂರು ಕೋಟಿ ಕಲೆಕ್ಷನ್ನಾಗಿದೆ. ಇನ್ನುಳಿದಂಎ ಸಾಗರದಾಚೆಗೂ ಜೈಲರ್ ಹವಾ ಏನು ಕಡಿಮೆ ಮಟ್ಟದ್ಲಿಲ್ಲ. ಸಾಗರದಾಚೆಗೆ, ವಿಶ್ವದ ನಾನಾ ದೇಶಗಳಲ್ಲಿ ಜೈಲರ್ ಒಟ್ಟಾರೆ ಗಳಿಕೆ 187 ಕೋಟಿ ದಾಟುತ್ತದೆ. ಇದೆಲ್ಲದರಿಂದಾಗಿ ಹದಿನೆಂಟು ದಿನ ಕಳೆಯುವಷ್ಟರಲ್ಲಿ ಜೈಲರ್ ಆರು ನೂರು ಕೋಟಿ ಕ್ಲಬ್ ಸೇರಿಕೊಳ್ಳುವ ಸನ್ನಾಹದಲ್ಲಿದೆ. ಈ ದಿನಮಾನದ ಮಟ್ಟಿಗಿದು ಸಮ್ಮೋಹಕವಾದ ಗೆಲುವೆಂಬುದರಲ್ಲಿಯಾವ ಸಂದೇಹವೂ ಇಲ್ಲ!