ಕಾಂತಾರ (kanthara movie) ಚಿತ್ರ ದಕ್ಕಿಸಿಕೊಂಡಿದ್ದ ಮಹಾ ಗೆಲುವಿನ ಪ್ರಭೆ, ಅದರ ಭಾಗವಾಗಿದ್ದ ಬಹುತೇಕರ ಬದುಕನ್ನು ಬೆಳಗಿಸಿದೆ. (rishabh shetty) ರಿಷಭ್ ಶೆಟ್ಟಿ ಮಾತ್ರವಲ್ಲದೇ, ಕಾಂತಾರದ ಭಾಗವಾಗಿದ್ದ ಕಲಾವಿದರು ಅಪಾರ ಪ್ರಮಾಣದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ನಾಯಕಿ (leela) ಲೀಲಾ ಪಾತ್ರದಲ್ಲಿ ನಟಿಸಿದ್ದ (sapthami gowda) ಸಪ್ತಮಿ ಗೌಡ ಕೂಡಾ ಆ ಸಾಲಿಗೆ ಸೇರಿಕೊಳ್ಳುತ್ತಾರೆ. ಕೆಲ ನಟಿಯರು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರವೂ ಸರಿಯಾದ್ದೊಂದು ಬ್ರೇಕ್ ಸಿಗದೆ, ಅವಕಾಶಗಳಿಗೆ ತತ್ವಾರವಾಗಿ ಪರದಾಡಿ ಬಿಡುತ್ತಾರೆ. ಆದರೆ, (sapthami gowda) ಸಪ್ತಮಿ ಗೌಡ ಆ ವಿಚಾರದಲ್ಲಿ ನಿಜಕ್ಕೂ ಅದೃಷ್ಟವಂತೆ. ಯಾಕೆಂದರೆ, ಎರಡೇ ಎರಡು ಸಿನಿಮಾಗಳ ಮೂಲಕ ಆಕೆಯ ನಸೀಬು ಸಂಪೂರ್ಣವಾಗಿ ಬದಲಾಗಿದೆ. ಕಾಂತಾರದ ಮಹಾ ಗೆಲುವಿದೆಯಲ್ಲಾ? ಅದು ಸಪ್ತಮಿಯನ್ನು ಏಕಾಏಕಿ (bollywood) ಬಾಲಿವುಡ್ ಮಟ್ಟಕ್ಕೇರಿಸಿ ಬಿಟ್ಟಿದೆ!
ಸಾಮಾನ್ಯವಾಗಿ ಒಂದು ದೊಡ್ಡ ಗೆಲುವು ಸಿಕ್ಕ ನಂತರದ ಹೆಜ್ಜೆ ನಿರ್ಣಾಯಕ. ಸೋಲೊಂದನ್ನು ಸಂಭಾಳಿಸುವುದು, ಗೆಲುವೊಂದನ್ನು ಮುಂದುವರೆಸಿಕೊಂಡು ಹೋಗುವುದೆಲ್ಲ ಹೆಚ್ಚು ಕಮ್ಮಿ ಒಂದೇ ತೆರನಾದ ಸವಾಲುಗಳನ್ನು ತಂದೊಡ್ಡುತ್ತವೆ. ಅದನ್ನು ದಾಟಿಕೊಳ್ಳುವುದಕ್ಕೆ ಬಲು ನಾಜೂಕು ನಡೆಗಳೇ ಬೇಕಾಗುತ್ತವೆ. ಆಪ್ತ ಮೂಲವೇ ಹೇಳುವ ಪ್ರಕಾರ, ಕಾಂತಾರ ನಂತರದಲ್ಲಿ ಹಲವಾರು ಅವಕಾಶಗಳು ಸಪ್ತಮಿಯನ್ನು ಅರಸಿ ಬಂದಿದ್ದವು. ಅವೆಲ್ಲವನ್ನೂ ಆಕೆ ನಯವಾಗಿಯೇ ನಿರಾಕರಿಸಿದ್ದಾರೆ. ಕಡೆಗೂ ವಿವೇಕ್ ಅಗ್ನಿಹೋತ್ರಿಯ `ವ್ಯಾಕ್ಸಿನ್ ವಾರ್’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್ ಲಾಂಚ್ ಆಗಿದೆ. ಅದರಲ್ಲಿ ಸಪ್ತಮಿ ಡಾಕ್ಟರ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಶ್ಮೀರ್ ಫೈಲ್ಸ್ ಎಂಬ ಸಿನಿಮಾ ಮೂಲಕ ಸದ್ದು ಮಾಡಿರುವಾತ ವಿವೇಕ್ ಅಗ್ನಿಹೋತ್ರಿ. ಇದೀಗ ಆತ ವ್ಯಾಕ್ಸಿನ್ ವಾರ್ ಚಿತ್ರವನ್ನು ನಿರ್ದೇಶನ ಮಾಡಿ ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಿದ್ದಾರೆ. ಈ ಚಿತ್ರ ಬಾಲಿವುಡ್ಡಿನಲ್ಲಿಯೂ ಸಪ್ತಮಿಯನ್ನು ನೆಲೆಗಾಣಿಸುವ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ. ಸಪ್ತಮಿಯಂತೂ ವ್ಯಾಕ್ಸಿನ್ ವಾರ್ ಬಗ್ಗೆ ಬಹಳಷ್ಟು ಹೋಪ್ ಗಳನ್ನಿಟ್ಟುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಾಲೂರಿ ನಿಲ್ಲುತ್ತಲೇ, ಬಾಲಿವುಡ್ ಸೇರಿದಂತೆ ಮತ್ತೊಂದಷ್ಟು ಭಾಷೆಗಳ ಸಿನಿಮಾಗಳಲ್ಲಿ ನಟಿಸ ಬೇಕೆಂಬ ಮಹದಾಸೆ ಸಪ್ತಮಿಯದ್ದಿದ್ದಂತಿದೆ.
ಕರ್ನಾಟಕ ಕಂಡ ಟಫ್ ಪೊಲೀಸ್ ಅಧಿಕಾರಿಯಾಗಿದ್ದ ಎಸ್.ಕೆ ಉಮೇಶ್ ಅವರ ಮಗಳು ಸಪ್ತಮಿ ಗೌಡ. ಮೂಲರ್ತ ಸ್ವಮ್ಮರ್ ಆಗಿರುವ ಸಪ್ತಮಿ ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟಿದ್ದರು. ಆ ಪಾತ್ರದ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಸಪ್ತಮಿಗೆ ವರವಾಗಿ ಸಿಕ್ಕ ಸಿನಿಮಾ ಕಾಂತಾರ. ಈ ಸಿನಿಮಾದ ಲೀಲಾ ಪಾತ್ರಧಾರಿಯಾಗಿ ಎಲ್ಲರನ್ನೂ ಆವರಿಸಿಕೊಂಡಿರುವ ಸಪ್ತಮಿ ಪಾಲಿಗೀಗ ಅವಕಾಶಗಳ ರಾಜ ಮಾರ್ಗವೇ ತೆರೆದುಕೊಂಡಿದೆ. ವ್ಯಾಕ್ಸಿನ್ ವಾರ್ ಆಕೆಯ ಪಾಲಿಗೆ ಮಹತ್ವದ ಚಿÀತ್ರ. ಯಾಕೆಂದರೆ, ಅದರ ಸೋಲು ಗೆಲುವಿನ ಮೇಲೆಯೇ ಸಪ್ತಮಿಯ ಬಾಲಿವುಡ್ ಯಾನದ ದಿಕ್ಕು ದೆಸೆಗಳು ನಿರ್ಧಾರವಾಗುತ್ತವೆ!