ರಜನೀಕಾಂತ್ (rajanikanth) ಅಭಿನಯದ ಜೈಲರ್ (jailer movie) ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಬಿರುಸಿನ ಪ್ರದರ್ಶನ ಕಾಣುತ್ತಿದೆ. ಯಾವುದೇ ತರ್ಕದ ಗೋಜಿಗೆ ಹೋಗದೆ, ರಜನಿ ಅವತಾರಗಳನ್ನು ತನ್ಮಯರಾಗಿ ಕಣ್ತುಂಬಿಕೊಳ್ಳುವವರು, ವಿಮರ್ಶಕ ದೃಷ್ಟಿಕೋನದಿಂದಲೇ ದಿಟ್ಟಿಸುವವರನ್ನೆಲ್ಲ ಜೈಲರ್ (jailer) ಆವರಿಸಿಕೊಂಡಿದೆ. ಈ ಭರಾಟೆಯ ನಡುವೆ ಒಂದಷ್ಟು ಕೊರತೆಗಳು, ತಕರಾರುಗಳೂ ಕೂಡ ಥಂಡಾ ಹೊಡೆದಂತಿವೆ. ಸಾಮಾನ್ಯವಾಗಿ, ಇಂಥಾ ಯಶಸ್ವೀ ಸಿನಿಮಾಗಳ ಅಬ್ಬರ ಶುರುವಾದ ನಂತರ, ಅದಕ್ಕೆ ಸಂಬಂಧಿಸಿದ ಮತ್ತೊಂದಷ್ಟು ಕುತೂಹಲಕವಾದ ಅಂಶಗಳು ಜಾಹೀರಾಗುತ್ತವೆ. ಜೈಲರ್ ವಿಚಾರದಲ್ಲಿಯೂ ಅದು ನಿಜವಾಗಿದೆ!
ಈ ಸಿನಿಮಾ ತಂಡವೀಗ ಚಿತ್ರೀಕರಣದ ಹಿಂಚುಮುಂಚಿನ ಒಂದಷ್ಟು ಬೆರಗಿನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮಲೆಯಾಳಂನ ಮೋಹನ್ ಲಾಲ್ ಮುಂತಾದವರು ನಟಸಿದ್ದಾರೆ. ಆ ಪಾತ್ರಗೆಲ್ಲವನು ಜನ ಇಷ್ಟಪಟ್ಟಿದ್ದಾರೆ. ಇವರೆಲ್ಲರೊಟ್ಟಿಗೆ ತೆಲುಗಿನ ನಂದಮೂರಿ ಬಾಲಕೃಷ್ಣ ಕೂಡಾ ಈ ಚಿತ್ರದಲ್ಲಿ ನಟಿಸಬೇಕಿತ್ತಂತೆ. ಆದರೆ, ಕೆಲ ಕಾರಣಗಳಿಂದಾಗಿ ನಿರ್ದೇಶಕರ ಗಮನ ಬೇರೆಡೆರಗೆ ವಾಲಿದ್ದರಿಂದಾಗಿ ಬಾಲಯ್ಯ ಜೈಲರ್ ಗೆ ಜೊತೆಯಾಗೋ ಅವಕಾಶ ವಲ್ಪದರಲ್ಲಿಯೇ ತಪ್ಪಿ ಹೋದಂತಾಗಿದೆ. ಈ ವಿಚಾರವನ್ನು ಖುದ್ದು ನಿರ್ದೇಶಕ ನೆಲ್ಸನ್ ಒಪ್ಪಿಕೊಂಡಿದ್ದಾರೆ.
ಜೈಲರ್ ಪ್ಯಾನಿಂಡಿಯಾ ಮಟ್ಟದ ಚಿತ್ರ. ರಜನೀ ಚಿತ್ರಗಳೆಂದ ಮೇಲೆ ದೇಶವ್ಯಾಪಿ ಬಿಡುಗಡೆಯಾಗೋದು ಮಾಮೂಲು. ಮಾರ್ಕೆಟಿಂಗ್ ದೃಷ್ಟಿಯಿಂದ ನಿರ್ದೇಶಕರು ಒಂದಷ್ಟು ರಾಜ್ಯಗಳಲ್ಲಿ ಭರ್ಜರಿ ಓಪನಿಂಗ್ ಸಿಗುವ ದೃಷ್ಟಿಯಿಂದ ಅಲ್ಲಿನ ನಟರನ್ನು ಒಳಗೊಂಡಂತೆ ಒಂದಷ್ಟು ಪಾತ್ರಗಳನ್ನು ಸೃಷ್ಟಿಸಿದ್ದರು. ಬಾಲಯ್ಯನಿಗಾಗಿ ನೆಗೆಟಿವ್ ಶೇಡ್ ಹೊಂದರುವ ರಗಡ್ ಪೊಲೀಸ್ ಪಾತ್ರವೊಂದನ್ನು ಸೃಷ್ಟಿಸಿದ್ದರಂತೆ. ಆದರೆ, ಆ ಪಾತ್ರವೇಕೋ ಅರ್ಧದಲ್ಲಿಯೇ ನಿಲ್ಲುವಂತಾಗಿತ್ತು. ಈ ಕಾರಣದಿಂಲೇ ಬಾಲಯ್ಯ ಜಲರ್ ಭಾಗವಾಗೋದು ತಪ್ಪಿತ್ತು. ಬಾಲಯ್ಯನ ಸಿನಿಮಾಗಳು, ಅದರ ದೃಷ್ಯಗಳು ಕಾಮಿಡಿ ಅನ್ನಿಸುತ್ತವೆಯಾದರೂ, ಆತನಿಗೆ ತೆಲುಗಿನಲ್ಲಿ ಭಾರೀ ಅಭಿಮಾನಿ ಬಳಗವಿದೆ. ಅವರದ್ದಿದ್ದರೆ, ಜೈಲರ್‍ಗೆ ತೆಲುಗಿನಲ್ಲಿ ಮತ್ತಷ್ಟು ಖದರ್ ನ ಗೆಲುವು ದಕ್ಕುತ್ತಿತ್ತೇನೋ…