ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ನೆಲೆ ಕಂಡುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊತ್ತಿರುವ ಹುಡುಗ (rural star anjan) ರೂರಲ್ ಸ್ಟಾರ್ ಅಂಜನ್. ಕೆಲ ಮಂದಿ ಇಂಥಾ ಕನಸನ್ನಿಟ್ಟುಕೊಂಡು ಊರೆಲ್ಲ ಅಲೆದಾಡುತ್ತಾರೆ. ಮತ್ಯಾರದ್ದೋ ಬಾಲ ಹಿಡಿದು ಹೊರಡುತ್ತಾರೆ. ಆದರೆ ನಾಯಕ ನಟನಾಗಲು ಬೇಕಾದ ಪರಿಶ್ರಮ ಮಾತ್ರ ಎಳ್ಳಷ್ಟೂ ಇರುವುದಿಲ್ಲ. ಈ ಸಾಲಿನಲ್ಲಿ (anjan) ಅಂಜನ್ ಖಂಡಿತಾ ಸೇರ್ಪಡೆಗೊಳ್ಳುವುದಿಲ್ಲ. ಯಾಕೆಂದರೆ, ಉತ್ತರ ಕರ್ನಾಟಕದ ಸೀಮಿತ ಪರಿಧಿಯಲ್ಲಿ ಈತ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ. ಆನರ ಪ್ರೀತಿಯನ್ನೂ ಗಳಿಸಿಕೊಂಡಿದ್ದಾರೆ. ಅದೆಲ್ಲದರ ಫಲವೆಂಬಂತೆ ಇದೀಗ ಕನ್ನಡ ಚಿತ್ರರಂಗಕ್ಕೆ (chola kannada mvie) ಚೋಳನ ಅವತಾರದಲ್ಲಿ ಅಂಜನ್ ಎಂಟ್ರಿ ಕೊಟ್ಟಿದ್ದಾರೆ. ಅದಕ್ಕೆ ಕಾರಣರಾಗಿರುವವರು ಕನ್ನಡ ಚಿತ್ರರಂಗದ ಸದಭಿರುಚಿಯ ನಿರ್ಮಾಪಕ, ನಿರ್ದೇಶಕ (suresh d.m) ಸುರೇಶ್ ಡಿ.ಎಂ!
ನಿಮಗೆ ನೆನಪಿರಬಹುದು; ವರ್ಷಾಂತರಗಳ ಹಿಂದೆ ರಣಹೇಡಿ, ಪ್ರಯಾಣಿಕರ ಗಮನಕ್ಕೆ ಎಂಬೆರಡು ಸಿನಿಮಾಗಳು ತೆರೆಗಂಡಿದ್ದವು. ಸೋಲು ಗೆಲುವಿನಾಚೆಗೆ ಹೊಸತನ ಮತ್ತು ಪ್ರಯೋಗಾತ್ಮಕ ಗುಣಗಳ ಕಾರಣದಿಂದ ಗಮನ ಸೆಳೆದಿದ್ದವು. ಆ ಎರಡೂ ಚಿತ್ರಗಳನ್ನು ನಿರ್ಮಾಣ ಮಾಡಿದ್ದವರು ಸುರೇಶ್ ಡಿ.ಎಂ. ಸಾಮಾನ್ಯವಾಗಿ ಸಿನಿಮಾ ನಿರ್ಮಾಣ ಅನ್ನೋದು ಪಕ್ಕಾ ವ್ಯವಹಾರ ಎಂಬ ನಂಬಿಕೆ ಇದೆ. ಅಂಥಾ ವ್ಯಾವಹಾರಿಕ ಜಗತ್ತಿಗೆ ಕ್ರಿಯೇಟಿವ್ ವಿಚಾರಗಳು ತಾಕೋದೂ ತುಸು ಕಷ್ಟ. ಆದರೆ, ಸುರೇಶ್ ಆ ಎರಡು ಸಿನಿಮಾಗಳ ಅವಧಿಯಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ, ಚೆಂದದ್ದೊಂದು ಕಥೆ ರೆಡಿ ಮಾಡಿಕೊಂಡು ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಗ್ರಾಮೀಣ ಭಾಗದ ಅಪ್ಪಟ ಪ್ರತಿಭೆ ಅಂಜನ್ ನನ್ನು ನಾಯಕನನ್ನಾಗಿಸಿದ್ದಾರೆ. ಇದೀಗ ಚಿತ್ರೀಕರಣದ ಹಂತದಲ್ಲಿರುವ ಚೋಳ ಚಿತ್ರದ ಟೀಸರ್ ಇದೇ ಆಗಸ್ಟ್ ೨೦ರಂದು ಬಿಡುಗಡೆಗೊಳ್ಳಲಿದೆ.
ಹಾಗಾದರೆ, ಈ ಸಿನಿಮಾ ಯಾವ ಬಗೆಯದ್ದು? ಶೀರ್ಷಿಕೆಯೇ ಚೋಳ ಅಂತಿರುವುದರಿಂದ, ಇದು ಐತಿಹಾಸಿಕ ಅಂಶಗಳನ್ನು ಒಳಗೊಂಡಿರುವ ಚಿತ್ರವಾ ಎಂಬಂಥಾ ಪ್ರಶ್ನೆಗಳು ಕಾಡೋದು ಸಹಜ. ಬಗ್ಗೆ ನಿರ್ದಕರು ಒಂದಷ್ಟು ಕುತೂಹಲಕರವಾದ ಅಂಶಗಳನ್ನು ತೆರೆದಿಟ್ಟಿದ್ದಾರೆ. ಅದರನ್ವಯ ಹೇಳೋದಾದರೆ, ಚೋಳ ಎಂಬುದು ಪಕ್ಕಾ ಮಾಸ್ ಚಿತ್ರ. ಪ್ರೀತಿ, ರೌಡಿಸಂ ಸೇರಿದಂತೆ ಅನೇಕ ಅಂಶಗಳು ಈ ಕಥೆಯಲ್ಲಿ ಮಿಳಿತವಾಗಿವೆಯಂತೆ. ಆದರೆ, ಒಟ್ಟಾರೆ ಸಿನಿಮಾ ಭಿನ್ನವಾಗಿರಲಿದೆ ಎಂಬ ಭರವಸೆಯೂ ನಿರ್ದೇಶಕರಲ್ಲಿದೆ. ಅಂದಹಾಗೆ, ಈ ಚಿತ್ರದಲ್ಲಿ ರೂರರಲ್ ಸ್ಟಾರ್ ಅಂಜನ್‌ಗೆ ಇಬ್ಬರು ನಾಯಕಿಯರ ಸಾಥ್ ಕೊಟ್ಟಿದ್ದಾರೆ. ದಿಶಾ ಪಾಂಡೆ ಮತ್ತು ಪ್ರತಿಭಾ ನಾಯಕಿಯರಾಗಿ ನಟಿಸಿದ್ದಾರೆ.
ತನ್ನ ಸೃಷ್ಟಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಸುರೇಶ್ ಡಿ.ಎಂ ಚೋಳ ಚಿತ್ರವನ್ನು ನಿರ್ಮಾಣ ಮಾಡಿ, ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಯರ್ರಾಬಿರ್ರಿ ಅಂತೊಂದು ಸಿನಿಮಾ ಮಾಡಿದ್ದ ರೂರಲ್ ಸ್ಟಾರ್ ಅಂಜನ್‌ರ ಪ್ರತಿಭೆಯನ್ನು ಗಮನಿಸಿದ್ದ ನಿರ್ದೇಶಕ ಸುರೇಶ್ ಈ ಚಿತ್ರಕ್ಕೆ ನಾಯಕನನ್ನಾಗಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದಿಶಾ ಪಾಂಡೆ ಮತ್ತು ಪ್ರತತಿಭಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ರಾಜ ಬಲವಾಡಿ ವಿಲನ್ನುಗಳಾಗಿ ನಟಿಸಿದ್ದಾರೆ ಮನಮೋಹನ್ ರಾಯ್ ರಂಥ ಹಿರಿಯ ನಟರು ವಿಶೇಷಪಾತ್ರಗಳನ್ನು ನಿಭಾಯಿಸಿದ್ದಾರೆ. ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು, ವರ್ಧನ್ ತೀರ್ಥಹಳ್ಳಿ ಮುಂತಾದವರ ತಾರಾಗಣ, ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಶಂಕರ್ ಸಂಕಲನ ಈ ಚಿತ್ರಕ್ಕಿದೆ.
ಯರ್ರಾಬಿರ್ರಿ ಅಂತೊಂದು ಚಿತ್ರದಲ್ಲಿ ಅಂಜನ್ ನಟನೆ ನೋಡಿ ಮೆಚ್ಚಿಕೊಂಡೇ ಸುರೇಶ್ ಆತನನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ನಿರ್ಮಾಪಕನಾಗಿ ದಕ್ಕಿಸಿಕೊಂಡ ಅನುಭವದ ಆಧಾರದಲ್ಲಿಯೇ ಈ ಚಿತ್ರವನ್ನವರು ಅಚ್ಚುಕಟ್ಟಾಗಿ ಪೊರೆದಿದ್ದಾರಂತೆ. ಇನ್ನುಳಿದಂತೆ, ಯೋಜನೆಯ ಪ್ರಕಾರವೇ ಚೋಳ ಯಶಸವಿಯಾಗಿ ಒಂದಷ್ಟು ಚಿತ್ರೀಕರಣ ಮುಗಿಸಿಕೊಂಡಿದೆ. ಬಹುಮುಖ್ಯ ಭಾಗಗಳ ಚಿತ್ರೀಕರಣ ಬಾಕಿ ಉಳಿದುಕೊಂಡಿದೆ. ಅನ್ನು ಬೇಗನೆ ಮುಗಿಸಿಕೊಂಡು, ಆಡಿಯೋ ಲಾಂಚ್ ಮಾಡುವ ನಿರ್ಧಾರ ಸುರೇಶ್ ಅವರದ್ದು. ಹಾಗೆ ಧ್ವನಿಸುರುಳಿಯ ನಂತರ ಟ್ರೈಲರ್ ಲಾಂಚ್ ಆಗಲಿದೆ. ಆಗಸ್ಟ್ ಇಪ್ಪತ್ತರಂದು ಬಿಡುಗಡೆಗೊಳ್ಳಲಿರುವ ಟೀಸರ್ ಚೋಳನ ಬಗೆಗಿನ ಒಂದಷ್ಟು ಅಂಶಗಳನ್ನು ಜಾಹೀರು ಮಾಡುವ ನಿರೀಕ್ಷೆಗಳಿದ್ದಾವೆ!