ಸದ್ಯಕೀಗ ಭಾರತೀಯ ಚಿತ್ರರಂಗದ ಕಣ್ಣು ಈ ವಾರ ಬಿಡುಗಡೆಗೊಳ್ಳಲಿರುವ (jailer) ಜೈಲರ್ ಮೇಲಿದೆ. ವಿಶ್ವಾದ್ಯಂತ ರಜನೀಕಾಂತ್ (rajanikanth new movie) ಅಭಿಮಾನಿಗಳು ಉಸಿರು ಬಿಗಿಹಿಡಿದು ಈ ಚಿತ್ರಕ್ಕಾಗಿ ಕಾದು ಕೂತಿದ್ದಾರೆ. ಸಾಮಾನ್ಯವಾಗಿ ಇಂಥಾದ್ದೊಂದು ಹೈ ವೋಲ್ಟೇಜ್ ಚಿತ್ರ ಬಿಡುಗಡೆಯ ಅಂಚಿನಲ್ಲಿರುವಾಗ, ಮಿಕ್ಕ ಚಿತ್ರಗಳು ತುಸು ಮಂಕಾದಂತೆ ಕಾಣಿಸುತ್ತವೆ. ಆದರೆ, ಅಬ್ಬರದ ನಡುವೆಯೂ ದಳಪತಿ ವಿಜಯ್ ಅಭಿನಯದ ಲಿಯೋ (leo) ಚಿತ್ರ ಅಡಿಗಡಿಗೆ ಸದ್ದು ಮಾಡುತ್ತಿದೆ. (lokesh kanagaraj) ಲೋಕೇಶ್ ಕನಕರಾಜ್ ನಿದೇಶನದಲೀಯೋ ಬಗೆಗಿನ ಇಂಟರೆಸ್ಟಿಂಗ್ ಸಂಗತಿಗಳು ಒಂದರ ಹಿಂದೊಂದರಂತೆ ಬಿಡುಗಡೆಗೊಳ್ಳುತ್ತಿವೆ.
ಲೋಕೇಶ್ ಕನಕರಾಜನ್ ಇದೀಗ ಸ್ಟಾರ್ ನಿರ್ದೇಶಕನಾಗಿ ಬದಲಾಗಿದ್ದಾರೆ. ಸಿನಿಮಾವೊಂದನ್ನು ಪ್ಯಾನಿಂಡಿಯಾ ಮಟ್ಟದಲ್ಲಿ ಮೊರೆಯುವಂತೆ ಕಟ್ಟಿ ನಿಲ್ಲಿಸುವ ಈ ಹುಡುಗನ ಛಾತಿ ಕಂಡು ಎಲ್ಲರೂ ಬೆರಗಾಗಿದ್ದಾರೆ. ಈ ಹಿಂದೆ ವಿಕ್ರಮ್ ಮೂಲಕ ದೊಡ್ಡ ಮಟ್ಟದ ಗೆಲುವು ದಾಖಲಿಸಿದ ಲೋಕೇಶ್, ಲಯೋ ಮೂಲಕ ಅದನ್ನು ಮರಿಸುವಂಥ ಮತ್ತೊಂದು ಗೆಲುವಿನತ್ತ ಕೈಚಾಚಿದ್ದಾರೆ. ಲಿಯೋ ಫಸ್ಟ್ ಲುಕ್, ಟ್ರೈಲರ್ಗಳಿಗೆ ಸಿಕ್ಕಿರುವ ರೆಸ್ಪಾನ್ಸ್ ಕಂಡು ಖುಷಿಗೊಂಡಿರುವ ಚಿತ್ರತಂಡವೀಗ ಈ ಸಿನಿಮಾದ ಪಾರ್ಟ್೨ಗೂ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಂಥಾದ್ದೊಂದು ಅಧಿಕೃತ ಮಾಹಿತಿಯೀಗ ಜಾಹೀರಾಗಿದೆ.
ಯಶ್ವಸ್ವೀ ಸಿನಿಮಾಗಳ ಸೀಕ್ವೆಲ್ ಬರೋದು ಮಾಮೂಲು. ಆದರೆ, ಬಿಡುಗಡೆಗೊಂಡು, ಸಿಗುವ ಪ್ರತಿಕ್ರಡುವ ತನಕ ಆ ಬಗ್ಗೆ ಮಾತಾಡುವ ಧೈರ್ಯವನ್ನು ಸಿನಿಮಾ ಮಂದಿ ಮಾಡೋದು ಅಪರೂಪ. ಆದರೆ, ಲೋಕೇಶ್ ಕನಕರಾಜನ್ ಮತ್ತವರ ತಂಡಕ್ಕೆ ಲಿಯೋ ದೊಡ್ಡ ಮಟ್ಟದಲ್ಲಿ ಗೆಲ್ಲುವ ಭರವಸೆ ಇದೆ. ಆ ಕಾರಣದಿಂದಲೇ ಎರಡನೇ ಭಾಗಕ್ಕೂ ಸರಿಕಟ್ಟಾದ ತಯಾರಿ ಮಾಡಿಕೊಂಡಿದ್ದಾರಂತೆ. ಅದರ ಶೂಟಿಂಗಿಗೂ ಕೂಡ ಪ್ಲಾನು ಈಗಾಗಲೇ ರೆಡಿಯಾಗಿದೆ. ವಿಜಯ್ ಕೂಡಾ ಇದಕ್ಕೆ ಓಕೆ ಅಂದಿದ್ದಾರಂತೆ. ಹಾಗಂತ, ಲಿಯೋ ಬಿಡುಗಡೆಗೊಂಡ ಬೆನ್ನಿಗೇ ಪಾರ್ಟ್ ೨ ಶುರುವಾಗೋದಿಲ್ಲ. ೨೦೨೫ರ ಆರಂಭದಲ್ಲಿಯೇ ಲಿಯೋ ಪಾರ್ಟ್ ೨ ಚಾಲೂ ಆಗಲಿದೆಯಂತೆ!