ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (tamanna bhatia) ಮತ್ತೆ ಫಾರ್ಮಿಗೆ ಮರಳಿದ್ದಾಳೆ. ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ತಮನ್ನಾ, ನಟನೆಗಿಂತಲೂ ಮಿಗಿಲಾಗಿ ತನ್ನ ಸ್ನಿಗ್ಧ ಸೌಂದರ್ಯದಿಂದಲೇ ಎಲ್ಲರ ತಲೆಕೆಡಿಸಿದ್ದಾಕೆ. ಸಿನಿಮಾ ಅಂದಮೇಲೆ ಕೇವಲ ಒನಪು, ವಯ್ಯಾರವಷ್ಟೇ ಇದ್ದರೆ ಬಚಾವಾಗೋದು ಕಷ್ಟ. ಈ ವಿಚಾರವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದ ತಮನ್ನಾ (tamannah) ನಟನೆಯಲ್ಲಿಯೂ ಹಂತ ಹಂತವಾಗಿ ಪಳಗಿಕೊಂಡಿದ್ದಳು. ಆ ಪ್ರತಿಭೆಯ ಮೂಲಕವೇ ಅನೇಕ ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಂಡು, ದಕ್ಷಿಣ ಭಾರತೀಯ ಚತ್ರರಂಗವನ್ನು ಆವರಿಸಿಕೊಂಡಿದ್ದಳು. ಹಂತ ಹಂತವಾಗಿ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯನ್ನೂ ಪಡೆದುಕೊಂಡಿದ್ದಳು. ಇಂಥಾ ತಮನ್ನಾ ಬಹುಕಾಲ ಮಂಕಾಗಿ, ಇದೀಗ ರಜನೀಕಾಂತ್ ನಟನೆಯ ಜೈಲರ್ (jailer) ಚಿತ್ರದ ಮೂಲಕ ಮತ್ತೆ ಚಿಗುರಿಕೊಂಡಿದ್ದಾಳೆ!
ನೆಲ್ಸನ್ ನಿರ್ದೇಶನದ ಜೈಲರ್ ಚಿತ್ರ ರಜನೀಕಾಂತ್ ವೃತ್ತಿ ಬದುಕಿನ ಮಹತ್ವದ ಚಿತ್ರವಾಗಿ ಬಿಂಬಿಸಿಕೊಂಡಿದೆ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸೇರಿದಂತೆ, ದಕ್ಷಿಣ ಭಾರತೀಯ ಚಿತ್ರರಂಗದ ಹಲವಾರು ಸ್ಟಾರ್ ನಟರು ಜೈಲರ್ಗೆ ಸಾಥ್ ಕೊಟ್ಟಿದ್ದಾರೆ. ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ತಮನ್ನಾ ಭಾಟಿಯಾ ಕೂಡಾ ಕಾಣಿಸಿಕೊಂಡಿದ್ದಾಳೆ. ಆಕೆ ಈ ಸಿನಿಮಾದ ಆಗವಾಗಿರುವ ಸುದ್ದಿ ಜಾಹೀರಾದಾಗ ಬಹುಶಃ ಈ ಮಟ್ಟಿಗೆ ಮೈಲೇಜು ಸಿಗಬಹುದೆಂಬ ಸಣ್ಣ ಆಲೋಚನೆಯೂ ಯಾರಿಗೂ ಕೂಡಾ ಬಂದಿರಲಿಕ್ಕಿಲ್ಲ. ಆದರೆ ಕಾವಾಲಾ ಅಂತೊಂದು ಹಾಡು ಹೊರಬಿತ್ತು ನೋಡಿ? ತಮನ್ನಾಳ ಪ್ರಭೆ ಒಂದೇ ಏಟಿಗೆ ಊರು ತುಂಬೆಲ್ಲ ಹಬ್ಬಿಕೊಂಡಿದೆ. ಅಂಥಾದ್ದೊಂಉ ಸಮ್ಮೋಹಕವಾದ ಭಂಗಿಯಲ್ಲಿ ಹೆಜ್ಜೆ ಹಾಕುವ ಮೂಲಕ ತಮನ್ನಾ ಎಲ್ಲರನ್ನೂ ಆವರಿಸಿಕೊಂಡು ಬಿಟ್ಟಿದ್ದಾಳೆ.
ಈ ಕಾವಾಲಾ ಹಾಡಿನ ಶಕ್ತಿ ಎಂಥಾದ್ದೆಂದರೆ, ತಮನ್ನಾ ಐಎಂಡಿಬಿ ರೇಟಿಂಗಿನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ನನ್ನೂ ಕೂಯಡಾ ಹಿಂದಿಕ್ಕಿದ್ದಾಳೆ. ಈ ಮೂಲಕ ಟಾಪ್ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾಳೆ. ತನ್ನ ಹದಿನೈದನೇ ವಯಸ್ಸಿನಲ್ಲಿ ಹಿಂದಿ ಸಿನಿಮಾವೊಂದರ ಮೂಲಕ ಬಣ್ಣ ಹಚ್ಚಿದ್ದಾಕೆ ತಮನ್ನಾ. ಆ ನಂತರ ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ನಾಯಕಿಯಗಿ ಮಿಂಚಿ, ಬಹುಬೇಡಿಕೆ ಪಡೆದುಕೊಂಡಿದ್ದ ತಮನ್ನಾ, ದಶಕಗಳಷ್ಟು ಕಾಲ ತುಸು ಮಂಕಾಗಿದ್ದಳು. ಇತ್ತೀಚೆಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಫಾರ್ಮಿಗೆ ಮರಳುವ ಯತ್ನದಲ್ಲಿದದ ತಮನ್ನಾಗೆ ಜೈಲರ್ ಮೂಲಕ ದೊಡ್ಡ ಬ್ರೇಕ್ ಸಿಗುವ ಲಕ್ಷಣಗಳಿದ್ದಾವೆ!