ಕಾಲ ಎಲ್ಲವನ್ನೂ ಬದಲಾಯಿಸುತ್ತೆ ಅನ್ನೋದು ಹಳೆಯದಾದರೂ ಸಾರ್ವಕಾಲಿಕ ಸತ್ಯ. ಸೋಲು ಗೆಲುವುಗಳ ಸರಪಳಿ ಸುತ್ತಿಕೊಂಡಿರೋದೂ ಕೂಡಾ ಆ ಸತ್ಯದ ಕೊಂಡಿಗೆಂಬುದೂ ಅಷ್ಟೇ ಸತ್ಯ. ಇದರಿಂದ ಸಿನಿಮಾ ರಂಗ ಹೊರತಾಗಲು ಸಾಧ್ಯವೇ? ಇಲ್ಲಿ ಗೆದ್ದು ಮೆರೆದವರು ಸೋತು ಮಂಕಾಗಿದ್ದಾರೆ. ಸೋಲಿನ ಕಹಿಯುಂಡು ಮುದುರಿ ಕೂತವರು ಮಹಾ ಗೆಲುವಿನ ವಾರಸೂದಾರರಾಗಿದ್ದಾರೆ. ಸದ್ಯಕ್ಕೆ ಅಂಥಾದ್ದೊಂದು ಕಾಲದ ಮಹಿಮೆ ಕೊಡಗಿನ ಹುಡುಗಿ (rashmika mandanna) ರಶ್ಮಿಕಾ ಮಂದಣ್ಣಳ ನೆತ್ತಿ ಮೇಲೆ ಗಿರಕಿ ಹೊಡೆಯುತ್ತಿರುವಂತಿದೆ. ಈಗೊಂದಷ್ಟು ವರ್ಷಗಳ ಹಿಂದೆ ತೆಲುಗಿಗೆ ಲಗ್ಗೆಯಿಟ್ಟು ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಂಡಿದ್ದಾಕೆ ರಶ್ಮಿಕ. ಇನ್ನು ತನ್ನನ್ಯಾರೂ ಹಿಡಿಯೋರಿಲ್ಲ ಎಂಬಂತೆ ಮರೆದಿದ್ದ ರಶ್ಮಿಕಾಗೀಗ ಕನ್ನಡದ ಹುಡುಗಿಯೊಬ್ಬಳು ತೀವ್ರ ಪ್ರತಿಸ್ಪರ್ಧೆ ಒಡ್ಡುತ್ತಿದ್ದಾಳೆ. ಆಕೆ ಕಿಸ್ ಹುಡುಗಿ (sreeleela) ಶ್ರೀಲೀಲಾ!
ಕಿಸ್ ಅಂತೊಂದು ಸನಿಮಾದಲ್ಲಿ ನಾಯಕಿಯಾಗಿ ನಟಿಸಿ, ಮೊದಲ ಹೆಜ್ಜೆಯಲ್ಲಯೇ ಗೆಲುವು ಪಡೆದಿದ್ದಾಕೆ ಶ್ರೀಲೀಲಾ. ಆ ನಂತರದಲ್ಲಿ ರಾಘವೇಂದ್ರ ರಾವ್ ನಿರ್ದೇಶನದ ಸಿನಿಮಾ ಮೂಲಕ ತೆಲುಗಿಗೂ ಎಂಟ್ರಿ ಕೊಟ್ಟಿದ್ದಳು. ಯಾವ ತಾರಾತಿಗಡಿಯೂ ಇಲ್ಲದೆ ತನ್ನ ಪಾಡಿಗೆ ತಾನಿರುವ, ಅಮ್ಮನ ಅಧ್ವಾನಗಳನ್ನು ಮೀರಿ ವಿವಾದಗಳಿಂದ ದೂರವಿರುವ ಈ ಹುಡುಗಿ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾಳೆ. ಆ ನಂತರ ಈಕೆ ಪಡೆದುಕೊಳ್ಳುತ್ತಿರುವ ಸಾಲು ಸಾಲು ಅವಕಾಶಗಳನ್ನು ಕಂಡು ಇತರೇ ನಟಿಯರು ಬೆಚ್ಚಿಬಿದ್ದಿದ್ದಾರೆ. ಇದೀಗ ಬೆಚ್ಚುವ ಸರದಿ ರಶ್ಮಿಕಾಳವರೆಗೂ ಸಾಗಿ ಬಂದಿದೆ. ಯಾಕೆಂದರೆ, ವೆಂಕಿ ಕುಡುಮುಲ ನಿರ್ದೇಶನದ ಚಿತ್ರಕ್ಕೆವ ರಶ್ಮಿಕ ನಾಯಕಿ ಅತ ಸುದ್ದಿಯಾಗಿತ್ತಾದರೂ, ಇದೀಗ ಆ ಅವಕಾಶ ಶ್ರೀಲೀಲಾಗೆ ಒಲಿದು ಬಂದಿದೆ!
ಅದೇನು ಅಹಮ್ಮಿಕೆಯೋ, ಗೆಲುವಿನ ಉತ್ಸಾಹವೋ ಗೊತ್ತಿಲ್ಲ; ಈ ರಶ್ಮಿಕಾ ಮಂದಣ್ಣ ಕೊಂಚ ಚಿಗುರಿಕೊಳ್ಳುತ್ತಲೇ ಏಕಾಏಕಿ ಮುಗಿಲು ಮುಟ್ಟುವ ಹುಂಬತನದೊಂದಿಗೆ ಮುಂದುವರೆಯುತ್ತಾಳೆ. ಕನ್ನಡದಲ್ಲಿ ನಾಯಕಿಯಾಗಿ ಪ್ಸಿದ್ಧಿ ಡೆಯುತ್ತಲೇ ಆಕೆ ತೆಲುಗಿಗೆ ಹಾರಿದ್ದಳು. ಒಂದಷ್ಟು ಕಾಲ ಕನ್ನಡವನ್ನು ಕಡೆಗಣಿಸಿ ಮುಂದುವರೆದಿದ್ದಳು. ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗುತ್ತಲೇ ತಮಿಳು, ಹಿಂದಿಯತ್ತ ಒಲಸೆ ಹೋಗುತ್ತಿದ್ದಾಳೆ. ಇದರ ಬೆನ್ನಿಗೇ ಶ್ರೀಲೀಲಾ ಬಂದಿದ್ದೇ, ಆಕೆಯ ಕೇಜ್ ರಶ್ಮಿಕಾಳನ್ನು ಬೀಟ್ ಮಾಡಿಬಿಟ್ಟಿದೆ. ಹೀಗಿರೋದರಿಂದಲೇ ರಶ್ಮಿಕಾಳಿಗೆ ಮೊದಲ ಆದ್ಯತೆ ಕೊಡುತ್ತಿದ್ದವರೆಲ್ಲ ಶ್ರೀಲೀಲಾಳತ್ತ ಮುಖ ಮಾಡಿದ್ದಾರೆಂಬ ವರ್ತಮಾನವಿದೆ. ಅಂತೂ ಶ್ರೀಲೀಲಾಳಿಂದಾಗಿ ಕನ್ನಡದ ರಶ್ಮಿಕಾ, ಪೂಜಾ ಹೆಗ್ಡೆಯಂತವರು ಸೈಡಿಗೆ ಸರಿಯುವಂಥಾ ವಾತಾವರಣ ನಿರ್ಮಾಣವಾಗಿದೆ!