ಬಾಹುಬಲಿ ನಂತರದಲ್ಲಿ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಿ, ವಿಶ್ವಾದ್ಯಂತ ಹವಾ ಎಬ್ಬಿಸಿರುವಾತ (prabhas) ಪ್ರಭಾಸ್. ಬಹುಬಲಿಯ ನಂತರದಲ್ಲಿ ಬಂದ ಪ್ರಭಾಸ್ (prabhas) ಚಿತ್ರಗಳು ನೆಲಕಚ್ಚಿವೆ. ಹೊರ ಜಗತ್ತಿನಲ್ಲಿ ಸೋಲೊಪ್ಪಿಕೊಂಡ ಅಂಥಾ ಸಿನಿಮಾಗಳ ಆರಂಭಿಕ ಕಲೆಕ್ಷನ್ನಿನ ಮಟ್ಟವಿದೆಯಲ್ಲಾ? ಅದು ಪ್ರಭಾಸ್‍ಗಿರೋ ಕ್ಷೇಜ್‍ಗೆ ಉದಾಹರಣೆಯಾಗಿ ನಿಲ್ಲುತ್ತವೆ. ಇತ್ತೀಚೆಗೆ ತೆರೆ ಕಂಡಿದ್ದ (adipurush) ಆದಿಪುರುಷ್ ಚಿತ್ರ ಹೀನಾಯವಾಗಿ ಕವುಚಿಕೊಂಡ ನಂತರದಲ್ಲಿ ಪ್ರಭಾಸ್‍ಗೆ ಜನಪ್ರಿಯತೆ ಕುಸಿಯುವ, ತನ್ನ ಕೆರಿಯರ್ ಪಾತಾಳ ಮುಟ್ಟುವ ಭಯ ವಿಪರೀತವಾಗಿ ಕಾಡಿದಂತಿದೆ. ಸೋಲು ಮುತ್ತಿಕೊಂಡರೂ ತನ್ನ ಸಿನಿಮಾಗಳ ಬಗ್ಗೆ ಅಷ್ಟೇನೂ ಕಾಳಜಿ ವಹಿಸದಿದ್ದ ಪ್ರಭಾಸ್ ಈಗ ಗಂಭೀರವಾದಂತಿದೆ. ಕಳ್ಳೇಪುರಿಯಂತೆ ಅವರಿವರ ಮರ್ಜಿಗೆ ಬಿದ್ದು ಕಾಲ್‍ಶೀಟು ಕೊಡುತ್ತಿದ್ದ ಬಾಹುಬಲಿಗೆ (bahubali) ಕಡೆಗೂ ಬುದ್ಧಿ ಬಂದಂತಿದೆ!
ಯಾವಾಗ ಕೆಜಿಎಫ್2 ಕೂಡಾ ದೊಡ್ಡ ಮಟ್ಟದಲ್ಲಿ ಹಿಟ್ ಆಯ್ತೋ, ಅದರ ಬೆನ್ನಲ್ಲಿಯೇ ಸಲಾರ್ ಚಿತ್ರ ಚಾಲೂ ಆಗಿತ್ತು. ಅದು ನಿಜಕ್ಕೂ ಬಿಗ್ ಪ್ರಾಜೆಕ್ಟು. ಅದಾಗಲೇ ಬಾಹುಬಲಿಯ ಪ್ರಭೆಯಾಚೆಗೂ ಸೋಲು ಕಂಡಿದ್ದ ಪ್ರಭಾಸ್ ಪಾಲಿಗೆ ಸಲಾರ್ ವರವಾಗುತ್ತದೆ. ಹಾಗಂತ ಸಿನಿಮಾ ಪಂಡಿತರುಗಳ ಕಡೆಯಿಂದಲೇ ವಿಶ್ಲೇಷಣೆಗಳು ಕೇಳಿ ಬಂದಿದ್ದರು. ಹೀಗೆ ಸಲಾರ್ ಒಪ್ಪಿಕೊಂಡ ನಂತರ ಆದಿಪುರುಷನ ಸೆಳೆತಕ್ಕೆ ಸಿಕ್ಕ ಪ್ರಭಾಸ್ ಅದರತ್ತ ಫೋಕಸ್ಸು ಮಾಡಿ ಸರಿಯಾಗಿಯೇ ಹೊಡೆತ ತಿಂದಿದ್ದಾನೆ. ಅದರ ಫಲವಾಗಿಯೇ ಈಗ ಬುದ್ಧಿವಂತ ನಡೆ ಶುರುವಿಟ್ಟುಕೊಂಡಿದ್ದನೆ.
ಪ್ರಭಾಸ್ ಸಲಾರ್ ಶುರುವಾದ ಆಸುಪಾಸಿನಲ್ಲಿಯೇ ಆದಿಪುರುಷ್ ಚಿತ್ರವನ್ನ ಒಪ್ಪಿಕೊಂಡಿದ್ದರು. ಅದರ ಬೆನ್ನಲ್ಲಿಯೇ ಸಂದೀಪ್ ವಂಗನೊಂದಿಗೆ ಪ್ರಾಜೆಕ್ಟ್ ಕೆಗೂ ಸಹಿ ಹಾಕಿದ್ದರು. ಅದಲ್ಲದೇ ಮಾರುತಿ ನಿರ್ದೇಶನದ ಇತ್ರವ್ನೂ ಒಪ್ಪಿಕೊಂಡಿದ್ದರು. ಇದೀಗ ಪ್ರಾಜೆಕ್ಟ್ ಕೆ ಪ್ರೊಡಕ್ಷನ್ ಹಂತದಲ್ಲಿದೆ. ಸಲಾರ್ ಕೆಲಸ ಸಂಪೂರ್ಣ ಮುಗಿದು, ಅದು ಬಿಡುಗಡೆಯಾದ ಮೇಲೆಯೇ ಆ ಸಿನಿಮಾದತ್ತ ಗಮನ ಹರಿಸುವ ನಿರ್ಧಾರಕ್ಕೆ ಪ್ರಭಾಸ್ ಬಂದಿದ್ದಾರೆ ಅನ್ನಲಾಗುತ್ತಿದೆ. ಮಾರುತಿ ನಿರ್ದೇಶನದ ಚಿತ್ರವನ್ನಂತೂ 2025ಕ್ಕೆ ಮುಂದೂಡಿದ್ದಾರಂತೆ. ಸದ್ಯಕ್ಕೆ ಒಂದು ಸೋಲಿನ ಪರ್ವವನ್ನು ಸಲಾರ್ ಸಹಕಾರದಿಂದಲೇ ದಾಟಿಕೊಳ್ಳುವ ಅನಿವಾರ್ಯತೆ ಪ್ರಭಾಸ್ ಮುಂದಿದೆ. ಆ ಕಾರಣದಿಂದಲೇ ಬಾಹುಬಲಿಗೀಗ ಬುದ್ಧಿ ಬಂದಿದೆ!