ಪ್ರೀತಿ ಎಂಬುದು ಸಿನಿಮಾ ಚೌಕಟ್ಟಿಗೆ ಸದಾ ಕಾಲವೂ ಫ್ರೆಶ್ ಆಗಿ ಒಗ್ಗಿಕೊಳ್ಳುತ್ತದಲ್ಲಾ? ಅಂಥಾದ್ದೇ ಸಾರ್ವಕಾಲಿಕ ತಾಜಾತನ ಹೊಂದಿರುವ ಮತ್ತೊಂದು ಮಾಯೆ ಕಾಲೇಜು ಮತ್ತದರ ಆಸುಪಾಸಿನ ಸಮ್ಮೋಹಕ ವಾತಾವರಣ. ಇದನ್ನೇ ರೂಪಕವಾಗಿಟ್ಟುಕೊಂಡಿರುವ ಅನೇಕ ಸಿನಿಮಾಗಳು ಬಂದಿವೆ. ಅದರಲ್ಲೊಂದಷ್ಟು ಯಶ ಕಂಡಿವೆ. ಕಾಲೇಜು ಲೈಫಿನ ತಳಹದಿ ಹೊಂದಿದ್ದ ಕಿರಿಕ್ ಪಾರ್ಟಿ ಕನ್ನಡದ ಮಟ್ಟಿಗೆ ಅಪರೂಪದ ಚಿತ್ರವಾಗಿ ದಾಖಲಾಗುತ್ತದೆ. ಇದೀಗ ಕಾಲೇಜು ಬದುಕಿನ ಅವಿಭಾಜ್ಯ ಅಂಗವಾಗಿರೋ ಹಾಸ್ಟೆಲ್ ಸುತ್ತ ಜರುಗೋ ಚಿತ್ರವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಹಾಗೆ ತನ್ನ ಆಂತರ್ಯದ ಗಟ್ಟಿತನದ ಹೊಳಹಿನೊಂದಿಗೆ ನಿರೀಕ್ಷೆ ಮೂಡಿಸಿರುವ ಚಿತ್ರ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಇದೀಗ ಅತ್ಯಂತ ಪರಿಣಾಮಕಾರಿಯಾಗಿರೋ ಟ್ರೈಲರ್ ಲಾಂಚ್ ಮಾಡುವ ಮೂಲಕ ಹಾಸ್ಟೆಲ್ ಹುಡುಗರ ಹಾವಳಿ ಮೇರೆ ಮೀರಿಕೊಂಡಿದೆ!
ಅಷ್ಟಕ್ಕೂ ಹಾಸ್ಟೆಲ್ ಹುಡುಗರ ಹಾವಳಿ ಸಣ್ಣಗೆ ಶುರುವಾಗಿ ವರ್ಷಗಳೇ ಕಳೆಯುತ್ತಾ ಬಂದಿವೆ. ಹಾಗೆ ಸುದೀರ್ಘಾವಧಿಯಲ್ಲಿ ಪ್ರೇಕ್ಷಕರನ್ನು ಸದಾ ಕಾಲವೂ ಸೆಳೆಯುವ ಸಲುವಾಗಿ ಚಿತ್ರತಂಡ ಜಾಣ್ಮೆಯ ನಡೆಯನ್ನೇ ಅನುಸರಿಸಿಕೊಂಡು ಬಂದಿದೆ. ಇದೆಲ್ಲ ಏನೇ ಇದ್ದರೂ ಈ ಹುಡುಗರ ಹಾವಳಿ ದಿನಗಳೆದಂತೆ ಇಷ್ಟೊಂದು ತೀವ್ರವಾಗುತ್ದೆಂದು ಯಾರೆಂದರೆ ಯಾರೂ ಅಂದುಕೊಂಡಿರಲಿಕ್ಕಿಲ್ಲ. ಹಾಗೆ ಈ ಚಿತ್ರವನ್ನು ಕೊಂಚ ಲಘುವಾಗಿ ಪರಿಗಣಿಸಿದ್ದವರೆಲ್ಲರೂ ಇತ್ತೀಚಿನ ವಿದ್ಯಮಾನಗಳನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ. ಆರಂಭಲಿ ಇದು ಹಾಸ್ಟೆಲ್ ಸುತ್ತ ಜರುಗೋ ಮಾಮೂಲಿ ಕಥೆ ಇರಬಹುದೆಂದುಕೊಂಡಿದ್ದವರಿಗೆ ಟ್ರೈಲರ್ ಮೂಲಕ ಹೊಸಾ ಜಗತ್ತೊಂದು ತೆರೆದುಕೊಂಡಿದೆ.
ತಾನೇ ತಾನಾಗಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಬಗೆಗೊಂದು ಕುತೂಹಲ ಹರಳುಗಟ್ಟಿಕೊಂಡಿತ್ತು. ಈ ಟ್ರೈಲರ್ ನೋಡಿದ ಬಳಿಕ ಅದು ಇನ್ನೂ ತೀವ್ರಗೊಂಡಿದೆ. ಪರಂವಃ ಸ್ಟುಡಿಯೋಸ್ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರಕೆ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಮೋಹಕ ತಾರೆ ರಮ್ಯಾ ಮುಂತಾದವರು ಸಥ ಕೊಟ್ಟಿದ್ದಾರೆ. ಇಲ್ಲಿರುವುದು ಕಾಲೇಜು ಹುಡುಗರ ಕಿತಾಪತಿಗಳ ಪ್ರವರವೇ ಆಗಿದ್ದರೂ ಕೂಡಾ, ಅದರಲ್ಲೇನೋ ವಿಶೇಷವಿದೆ ಎಂಬುದನ್ನು ಈ ರೈಲರ್ ಜಾಹೀರು ಮಾಡಿದೆ. ಈ ಟ್ರೈಲರ್ ಮೂಲಕವೇ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರ ಬಹುನಿರೀಕ್ಷಿತ ಸಿನಿಮಾವಾಗಿ ನೆಲೆ ಕಂಡುಕೊಂಡಿದೆ.
ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋಸ್ ಮೂಲಕ ನಿರ್ಮಾಣಗೊಳ್ಳುವ ಸಿನಿಮಾಗಳಲ್ಲಿ ಒಂದು ಗುಣಮಟ್ಟವನ್ನು ಕಾಯುಕೊಂಡು ಬಂದಿದ್ದಾರೆ. ಆಯ್ಕೆಯ ವಿಚಾರದಲ್ಲಿ ಬಲು ಚೂಸಿಯಾಗಿರುವ ರಕ್ಷಿತ್, ಒಂದು ಸಿನಿಮಾ ನಿರ್ಮಾಣಕ್ಕ ಮುಂದಾದರೆಂದರೆ ಅಉ ಭಿನ್ನವಾಗಿರುತ್ತದೆಂಬ ನಂಬಿಕೆ ಪ್ರೇಕ್ಷಕರಿಗೂ ಬಂದು ಬಿಟ್ಟಿದೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಆ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸುವಂತಿದೆ. ಕಥೆಯೂ ಭಿನ್ನ, ಪಾತ್ರ ವರ್ಗವೂ ವಿಶೇಷ… ಒಟ್ಟಾರೆಯಾಗಿ ಎಲ್ಲ ವರ್ಗದ ಪ್ರೇಕ್ಷಕರೂ ಕೂಡಾ ಹಾಸ್ಟೆಲ್ ಹುಡುಗರಿಗಾಗಿ ಕಾದು ಕೂರುವಂತಾಗಿದೆ. ಅದರಲ್ಲಿಯೂ ರಮ್ಯಾ ಬಹು ಕಾಲದ ನಂತರ ಈ ಸಿನಿಮಾದ ಮೂಲಕ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರವೂ ಈ ಟ್ರೈಲರ್ನಲ್ಲಿ ರಿವೀಲ ಆಗಿದೆ. ಒಟ್ಟಾರೆಯಾಗಿ ಈ ಟ್ರೈಲರ್ನಿಂದಾಗಿ ಹಾಸ್ಟೆಲ್ ಹುಡುಗರ ಹಾವಳಿ ಮತ್ತಷ್ಟು ಹೆಚ್ಚಾಗಿದೆ!