ಒಂದೆಡೆ ಛಿದ್ರಗೊಂಡಿದ್ದ ಖಾಸಗೀ ಬದುಕು, ಒಂಟಿಯಾಗಿ ನಿಂತಿದ್ದಾಗ ಬಂದು ತಬ್ಬಿಕೊಂಡ ಭಯಾನಕ ಖಾಯಿಲೆ… ಇದೆಲ್ಲದರಿಂದ ತಬ್ಬಿಗೊಂಡು, ರೌರವ ನರಕ ಅನುಭವಿಸಿದ್ದದ್ದಾಕೆ ನಟಿ (samantha) ಸಮಂತಾ. ಒಂದು ಕಾಲದಲ್ಲಿ ಈ ಸ್ನಿಗ್ಧ ಸೌಂದರ್ಯದ ಹುಡುಗಿಯನ್ನು ಕಂಡು ಪಡ್ಡೆಗಳೆಲ್ಲ ಹೆಚ್ಚೆದ್ದಿದ್ದರು. ಆ ನಂತರ ಒಂದಷು ಸಿನಿಮಾಗಳಲ್ಲಿ ನಟಿಸಿ, ಮದುವೆಯ ಬಂಧನಕ್ಕೀಡಾಗಿದ್ದ (samantha) ಸಮಂತಾ ಪಾಲಿಗೆ ಆ ಬಂಧವೇ ತಲೆ ನೋವಾಗಿ ಕಾಡಲಾರಂಭಿಸಿತ್ತು. ಆ ನೋವು ಮತ್ತು ಖಾಯಿಲೆಯ ಬಾಧೆಯಿಂದ ತತ್ತರಿಸಿದ್ದ ಸಮಂತಾಳ ವೃತ್ತಿ ಬದುಕೀಗ ಮತ್ತೊಂದು ಆಯಾಮದತ್ತ ಹೊರಳಿಕೊಂಡಿದೆ. ಹೊಸಾ ಸಿನಿಮಾವೊಂದರಲ್ಲಿ ವಿಜಯ್ ದೇವರಕೊಂಡನಿಗೆ (vijay devarakonda) ಜೋಡಿಯಾಗಿರೋ ಸಮಂತಾ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದಾಳೆ.
ಈ ಬಗ್ಗೆ ಖುದ್ದು ವಿಜಯ್ ದೇವರಕೊಂಡ (vijay devarakonda) ಫೋಟೋವೊಂದನ್ನು ಸಾಮಾಜಿಕ ಆಲತಾಣದಲ್ಲಿ ಹಂಚಿಕೊಂಡಿದ್ದಾನೆ. ಇದಷ್ಟೇ ಅಲ್ಲದೇ ಸಮಂತಾಳನ್ನು ಫೇವರಿಟ್ ಗರ್ಲ್ ಎಂದೂ ಬರೆದುಕೊಂಡಿದ್ದಾನೆ. ಯಾವಾಗ ರಸಿಕ ವಿಜಯ್ ದೇವರಕೊಂಡ ಹಾಗೆ ಬರೆದುಕೊಂಡನೋ, ಖಾಲಿ ಕುಂತ ಸಾಮಾಜಿಕ ಆಲತಾಣ ಪಂಡಿತರು, ವಿಶ್ಲೇಷಕರೆಲ್ಲ ತಮ್ಮದೇ ರೀತಿಯಲ್ಲಿ ಮಾತಾಡಲರಂಭಿಸಿದ್ದಾರೆ. ದೇವರಕೊಂಡ ಈ ಸ್ಟೇಟ್‍ಮೆಂಟು ಕಂಡು ರಶ್ಮಿಕ ಮಂದಣ್ಣನಿಗೆ (rashmika mandanna) ಉರಿ ತರಿಸಿರಬಹುದು ಅಂತೆಲ್ಲ ಕೆಲ ಮಂದಿ ಆಡಿಕೊಳ್ಳಲಾರಂಭಿಸಿದ್ದಾರೆ. ಆದರೆ, ವಿಜಯ್ ದೇವರಕೊಂಡ ಮತ್ತು ಸಮಂತಾ ಖುಷಿ ಎಂಬ ರೊಮ್ಯಾಂಟಿಕ್ ಸಿನಿಮಾಕ್ಕೋಸ್ಕರ ಜೊತೆಯಾಗಿದ್ದಾರಷ್ಟೇ ಅಂತ ಕೆಲ ಮಂದಿ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇದೆಲ್ಲ ಏನೇ ಇದ್ದರೂ ಈ ಹುಡುಗಿ ಸಮಂತಾ ಇಷ್ಟು ಬೇಗನೆ ಎಲ್ಲ ನೋವು, ಮಾನಸಿಕ ಹಿಂಸೆಗಳನ್ನೆಲ್ಲ ಕೊಡವಿಕೊಂಡು ಎದ್ದು ನಿಂತಿರೋದು ಪ್ರಶಂಸಾರ್ಹ ಸಂಗತಿ. ಖಾಸಗಿ ಬದುಕು ಛಿದ್ರಗೊಂಡಾಗ, ನಂಬಿಕೆಗಳು ಮುಕ್ಕಾದಾಗ, ಎಲ್ಲ ಕನಸುಗಳೂ ಕಣ್ಣೆದುರ ಉರಿದು ಬೂದಿಯಾದಾಗ ಎಂಥಾ ಗಟ್ಟಿಗರೇ ಆಗಿದ್ದರೂ ಕಂಗಾಲಾಗುತ್ತಾರೆ. ಅದಕ್ಕೆ ಸೆಲೆಬ್ರಿಟಿಗಳು, ಜನ ಸಾಮಾನ್ಯರೆಂಬ ಬೇಧ ಭಾವಗಳಿಲ್ಲ. ಅದೆಲ್ಲವನ್ನೂ ಮೀರಿಕೊಂಡು ಮೇಲೆದ್ದು ನಿಲ್ಲುವುದು ಕೆಲ ಮಂದಿಯಿಂದ ಮಾತ್ರವೇ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನೋಡೋದಾದರೆ ಸಮಂತಾ ನಿಜಕ್ಕೂ ಗಟ್ಟಿಗಿತ್ತಿಯೇ. ಆಕೆಯೀಗ ಖುಷಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾಳೆ. ಮತ್ತೊಂದಷ್ಟು ಅವಕಾಶಗಳು ಸಮಂತಾಳನ್ನು ಅರಸಿ ಬರುತ್ತಿವೆ.