ಈ ಹಿಂದೆ ದೇಶದ ರೈತರು ಪ್ರತಿಭಟನಾ ನಿರತರಾಗಿದ್ದಾಗ ಮೋದಿ (narendra modi) ಸರ್ಕಾರ ಅದನ್ನು ಹತ್ತಿಕ್ಕಲು ನಾನಾ ಸರ್ಕಸ್ಸುಗಳನ್ನು ನಡೆಸಿತ್ತು. ಆ ಹೋರಾಟದೊಂದಿಗೆ ಖಲಿಸ್ತಾನಿ ಉಗ್ರರು (khalistan terrorist) ಸೇರಿಕೊಂಡಿದ್ದಾರೆ ಅಂತೆಲ್ಲ ಸುದ್ದಿ ಹಬ್ಬಿಸುವ ಮೂಲಕ ಅನ್ನದಾತರ ಒಡಲ ಆಕ್ರೋಶವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿದ್ದವು. ಆದರೆ, ಅಂಥಾ ಪ್ರತಿಭಟನೆ ನಡೆದ ಸಂದರ್ಭದಲ್ಲಿಯೂ ಅನ್ನ ತಿಂದು ಬದುಕೋ ಸಿನಿಮಾ ಮಂದಿ ಅನ್ನದಾತರ ಪರವಾಗಿ ನಿಲ್ಲುವ ಔದಾರ್ಯ ತೋರಿದ್ದು ವಿರಳ. ಇದೀಗ ಮೆಡಲ್ಲು ತಂದು ಕೊಟ್ಟ ದೇಶದ ಹೆಮ್ಮೆಯ ಮಹಿಳಾ ಕುಸ್ತಿ ಪಟುಗಳು ಭಾರತೀಯ ಕುಸ್ತಿ ಫೆಡರೇಷನ್ (wrestling federation of india) ಅಧ್ಯಕ್ಷ ಬ್ರಿಜ್ ಭೂಷಣ್ (brij bhushan sharan singh) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿಯೂ ಕೆಲವ ಕೆಲ ಮಂದಿಯನ್ನು ಹೊರತಾಗಿಸಿ, ಸಿನಿಮಾ ಮಂದಿ ಬಾಯಿಗೆ ಬೀಗ ಜಡಿದುಕೊಂಡು ಕೂತಿದ್ದಾರೆ!
ಇಂಥಾ ಹೊತ್ತಿನಲ್ಲಿ ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಸಿಂಪಲ್ ಸುನಿ (simple suni) ನೊಂದ ಮಹಿಳಾ ಕುಸ್ತಿ ಪಟುಗಳ ಪರವಾಗಿ ಧ್ವನಿಯೆತ್ತಿದ್ದಾರೆ. ದೇಶಕ್ಕೆ ಕೀರ್ತಿ ತಂದ ಕ್ರೀಡಾ ಪಟುಗಳನ್ನು ಈ ರೀತಿಯಾಗಿ ನೋಡಲು ಬೇಸರವಾಗುತ್ತದೆ. ಪರಿಸ್ಥಿತಿ ಇಷ್ಟು ಗಂಭೀರವಾದ ನಂತರವಾದರೂ ದೊಡ್ಡವರು ಹೋಗಿ ಮಾತುಕತೆ ನಡೆಸೋದೊಳಿತು. ಕೇಸು ಕೋರ್ಟ್‍ನಲ್ಲಿದೆ. ನ್ಯಾಯಾಂಗದ ಮೇಲ ನಂಬಿಕೆ ಇಡಬೇಕು. ಆದರೆ ಆತನ ಹಿನ್ನಕಲೆ ಗಮನಿಸಿದರೆ, ಕಾನೂನಿನ ಮೇಲೆಯೂ ಪ್ರಭಾವ ಬೀರಬಹುದು’ ಎಂಬರ್ಥದಲ್ಲಿ ಸುನುಇ ಟ್ವೀಟ್ ಮಾಡಿದ್ದಾರೆ. ಇಷ್ಟರ ಮಟ್ಟಿಗೆ ಸಾಮಾಜಿಕ ಕಾಳಜಿ ಹೊಂದಿರುವ ಸಿಂಪಲ್ ಸುನಿಯನ್ನು ಮೆಚ್ಚಿಕೊಳ್ಳಲೇ ಬೇಕು.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಒಬ್ಬ ಮಹಾನ್ ಕ್ರಿಮಿನಲ್ ಎಂಬುದು ಈಗಾಗಲೇ ಇಡೀ ದೇಶಕ್ಕೆ ಗೊತ್ತಾಗಿದೆ. ಕೊಲೆ ಎಂಬುದು ಈತನಿಗೆ ಸಲೀಸು. ಒಂದು ವೇಳೆ ಈತ ಕಳಂಕರಹಿತನಾಗಿದ್ದರೆ, ಆತನ ಮೇಲೆ ಇಂಥಾ ಆರೋಪ ಕೇಳಿ ಬಂದಿದ್ದರೆ ಮೋದಿಯಮೌನಕ್ಕೊಂದು ಅರ್ಥ ಇರುತ್ತಿತು. ಆದರೆ ಕ್ರಿಮಿನಲ್ಲು ಬಿಜೆಪಿಯ ಪ್ರಭಾವಿ ಕುಳ ಎಂಬ ಮುಲಾಜಿಗೆ ಬಿದ್ದು ಇದೀ ಆಡಳಿತ ಯಂತ್ರ ನೊಂದ ಮಹಿಳಾ ಕುಸ್ತಿ ಪಟುಗಳ ವಿರುದ್ಧ ತಿರುಗಿ ಬಿದ್ದಿದೆ ಎಂದೇ ಎಲ್ಲರಿಗೂ ಅನಿಸಲಾರಂಭಿಸಿದೆ. ಒಂದು ವೇಳೆ ಅದು ಸತ್ಯವೇ ಆಗಿದ್ದರೆ, ಇನ್ನೂ ಕೂಡಾ ಮೌನ ಮುಂದುವರೆದರೆ ಅದು ಮೋದಿ ಸರ್ಕಾರಕ್ಕೆ ಎಂದೂ ಅಳಿಸಲಾರದಂಥಾ ಕಪ್ಪುಚುಕ್ಕೆಯಾಗೋದರಲ್ಲಿ ಯಾವ ಸಂದೇಹವೂ ಇಲ್ಲ!